ಅಂಚೆ ಅಣ್ಣಂದಿರಿಗೆ ಅ.1ರಿಂದ ಖಾಕಿ ಬದಲು ನೀಲಿ ಬಣ್ಣದ ಸಮವಸ್ತ್ರ
ಅಂಚೆ ಅಣ್ಣಂದಿರಿಗೆ ಅ.1ರಿಂದ ಖಾಕಿ ಬದಲು ನೀಲಿ ಬಣ್ಣದ ಸಮವಸ್ತ್ರ
ಇಲಾಖೆಯ ನೌಕರರ ಬಹುದಿನದ ಬೇಡಿಕೆಗೆ 150ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಸ್ತು
ಮುಂದಿನ ತಿಂಗಳ ಅಕ್ಟೋಬರ್ 1 ರಿಂದಲೇ ಬದಲಾದ ಸಮವಸ್ತ್ರ ಜಾರಿಗೆ ಬರಲಿದೆ. ಪುರುಷ ನೌಕರರು ದಟ್ಟ ನೀಲಿ ಪ್ಯಾಂಟ್, ತಿಳಿ ನೀಲಿ ಬಣ್ಣದಶರ್ಟ್ ಹಾಗೂ ಮಹಿಳಾ ನೌಕರರು ದಟ್ಟ ನೀಲಿ ಬಾರ್ಡರ್‌ನ ತಿಳಿ ನೀಲಿ ಬಣ್ಣದ ಸೀರೆ ಅಥವಾ ಸಲ್ವರ್ ಕಮೀಜ್‌ಗಳನ್ನು ಈ ಆದೇಶದನ್ವಯ ಧರಿಸಬೇಕಾಗುತ್ತದೆ. ಇಲಾಖೆಯ ಚಿಹ್ನೆಯನ್ನು ಸಮವಸ್ತ್ರ ಒಳಗೊಂಡಿರುತ್ತದೆ.
ಇಲಾಖಾ ನೌಕರರ ಬಹುದಿನದ ಬೇಡಿಕೆಗೆ ಈಗ ಜೀವ ಬಂದಿದೆ.
ಬಿಸಿಲಲ್ಲಿ ಸುತ್ತಾಡುತ್ತ ಕರ್ತವ್ಯ ನಿರ್ವಹಿಸುವ ಕಾರಣ ಖಾಕಿ ಸಮವಸ್ತ್ರ ಪೂರಕವಾಗಿರಲಿಲ್ಲ. ಅಲ್ಲದೇ ನಮ್ಮನ್ನು ಪೋಲೀಸರೆಂದು ನಾಗರಿಕರು ತಪ್ಪಾಗಿ ತಿಳಿದುಕೊಳ್ಳುತ್ತಿದ್ದಾರೆಂಬ ದೂರುಗಳ ಹಿನ್ನೆಲೆಯಲ್ಲಿ ಇಲಾಖೆ ನೀಲಿ ಸಮವಸ್ತ್ರ ಧರಿಸುವಂತೆ ಆದೇಶ ಹೊರಡಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications