ಆತಂಕ ಬಿಡಿ, ಬಾಳುವೆವು ಕೂಡಿ : ಸರ್ಕಾರದ ಜೋಡಿ ಕಾಮೆಡ್-ಕೆ
ಆತಂಕ ಬಿಡಿ, ಬಾಳುವೆವು ಕೂಡಿ : ಸರ್ಕಾರದ ಜೋಡಿ ಕಾಮೆಡ್-ಕೆ
ಸಡಿಲವಾದ ಸಿಇಟಿ ಕಗ್ಗಂಡು ; ವಿದ್ಯಾರ್ಥಿಗಳು, ಪೋಷಕರಲ್ಲಿ ನಿಟ್ಟುಸಿರು
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ತೀರ್ಮಾನ ತೆಗೆದು ಕೊಳ್ಳಲಾಗಿದೆ. ಸರ್ಕಾರಕ್ಕೆ ವೈದ್ಯಕೀಯ ಕೋರ್ಸುನಲ್ಲಿ 1560 ಸೀಟುಗಳು ಲಭ್ಯವಾಗಿವೆ. ಶುಲ್ಕದ ವಿಚಾರದಲ್ಲಿ ಸರ್ಕಾರಕ್ಕೆ ಸುಮಾರು 50 ಕೋಟಿ ರೂ. ಗಳು ಉಳಿತಾಯವಾಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಸೀಟುಗಳ ವಿತರಣೆ : ಶೇ 60ರಷ್ಟು ಸೀಟುಗಳಲ್ಲಿ ಪ್ರತಿಭಾವಂತರ ಹಾಗೂ ಮೀಸಲಾತಿ ಕೋಟಾ ದಲ್ಲಿ ಬರುವ ಶೇಕಡಾ 30ರಷ್ಟು ಸೀಟುಗಳಿಗೆ 35ಸಾವಿರ ರೂ. ಶುಲ್ಕವನ್ನು ನಿಗದಿಮಾಡಲಾಗಿದೆ(ಈ ವರ್ಷ 10 ಸಾವಿರ ರೂ. ಗಳು ಕಡಿಮೆಯಾಗಿದೆ). ಇನ್ನುಳಿದ ಶೇ.30 ರಷ್ಟು ಸೀಟುಗಳಿಗೆ 1.65 ಲಕ್ಷ ರೂ. ಗಳನ್ನು ನಿಗದಿ ಮಾಡಲಾಗಿದೆ(ಕಳೆದ ವರ್ಷ1.90 ಲಕ್ಷ ರೂ. ಪಾವತಿಸ ಬೇಕಾಗಿತ್ತು). ಎನ್‌ಆರ್‌ಐ ಕೋಟಾ ಹೊರತು ಪಡಿಸಿ ಆಡಳಿತ ಮಂಡಳಿಯ ಕೋಟಾಕ್ಕೆ 3.75 ಲಕ್ಷ ರೂ.ಗಳನ್ನು ನಿಗದಿ ಮಾಡಲಾಗಿದೆ.
ಶೇಕಡಾ 40ರಷ್ಟು ಸೀಟುಗಳು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಅವುಗಳಲ್ಲಿ ಶೇ.10ರಷ್ಟು ಸೀಟುಗಳನ್ನು ಎನ್‌ಆರ್‌ಐ ಕೋಟಾ ಎನ್ನಲಾಗಿದೆ. ಈ ಸೀಟುಗಳಿಗೆ ಶುಲ್ಕ ನಿಗದಿ ಪಡಿಸುವ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ಬಿಟ್ಟುಕೊಡಬೇಕು ಎಂಬ ತೀರ್ಮಾನಕ್ಕೆ ಸರಕಾರ ಒಪ್ಪಿದೆ.
ದಂತ ವೈದಕೀಯ ಸೀಟು ಹಂಚಿಕೆ : ಸರ್ಕಾರದ ಶೇಕಡಾ 60ರಷ್ಟು ಸೀಟುಗಳ ಪೈಕಿ 30ರಷ್ಟು ಕೋಟಾಗೆ 25 ಸಾವಿರ ರೂ.ಗಳು ಇನ್ನುಳಿದ ಶೇ.30 ರಷ್ಟು ಸೀಟುಗಳಿಗೆ 1ಲಕ್ಷ ರೂ.ಗಳು, ಆಡಳಿತ ಮಂಡಳಿ ಕೋಟಾಕ್ಕೆ2.75 ಲಕ್ಷ ರೂ.ಗಳು ನಿಗದಿ ಮಾಡಲಾಗಿದೆ.
ಇಂಜನೀಯರಿಂಗ್ ಸೀಟು ಹಂಚಿಕೆ : ಶೇಕಡಾ.30 ರಷ್ಟು ಕೋಟಾಕ್ಕೆ 15 ಸಾವಿರ ರೂ.ಗಳು, ಇನ್ನುಳಿದ 30ರಷ್ಟು ಸೀಟುಗಳಿಗೆ 50 ಸಾವಿರ ರೂ.ಗಳು, ಆಡಳಿತ ಮಂಡಳಿ ಸೀಟುಗಳಿಗೆ 1ಲಕ್ಷ ರೂ.ಗಳು ನಿಗದಿಮಾಡಲಾಗಿದೆ.
ಸರ್ಕಾರ ಮತ್ತು ಕಾಮೆಡ್-ಕೆ ನಡುವಿನ ್ಫಒಪ್ಪಂದದಿಂದಾಗಿ ಸೆ.4ರಂದು ಸುಪ್ರೀಂಕೋರ್ಟ್‌ನಲ್ಲಿ ಎಲ್ಲವೂ ಸುಗಮವಾಗಿ ಬಗೆಹರಿಯುವ ವಿಶ್ವಾಸವಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications