ಬಾಹ್ಯಾಕಾಶ ವಿಜ್ಞಾನಿಗಳ ಟಾಪ್10 ಪಟ್ಟೀಲಿ ಪ್ರೊ.ಯು.ಆರ್.ರಾವ್
ಬಾಹ್ಯಾಕಾಶ ವಿಜ್ಞಾನಿಗಳ ಟಾಪ್10 ಪಟ್ಟೀಲಿ ಪ್ರೊ.ಯು.ಆರ್.ರಾವ್
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಮೂಲಕ ನಾಗರಿಕ, ವಾಣಿಜ್ಯ ಹಾಗೂ ಮಿಲಿಟರಿ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗೆ ಸಂದ ಮನ್ನಣೆ
ಬೆಂಗಳೂರು : ವಿಶ್ವದ ಶ್ರೇಷ್ಠ ಹತ್ತು ವಿಜ್ಞಾನಿಗಳಲ್ಲಿ ಒಬ್ಬರೆಂಬ ಹೆಮ್ಮೆಗೆ ಇಸ್ರೋ ಮಾಜಿ ಅಧ್ಯಕ್ಷ ಯು.ಆರ್.ರಾವ್ ಪಾತ್ರರಾಗಿದ್ದಾರೆ. ಅಮೇರಿಕಾದಿಂದ ಪ್ರಕಟಿತವಾಗುವ ಸ್ಪೇಸ್ ನ್ಯೂಸ್ ಪತ್ರಿಕೆ, ಬಾಹ್ಯಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಮಹತ್ವದ ಸೇವೆ ಸಲ್ಲಿಸಿದ ಹತ್ತು ಮಂದಿ ವಿಜ್ಞಾನಿಗಳನ್ನು ಗುರುತಿಸಿ ಆಗಸ್ಟ್ 23 ರ ಸಂಚಿಕೆಯಲ್ಲಿ ಪ್ರಕಟಿಸಿದ ಲೇಖನದಲ್ಲಿ ಡಾ.ಯು.ಆರ್.ರಾವ್ ಸಾಧನೆಯನ್ನು ಶ್ಲಾಘಿಸಿದೆ.
ಪ್ರೊ.ರಾವ್ ಇಸ್ರೋ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಪಗ್ರಹ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ಸರ್ವಾಧಿಕಾರಿ ಧೋರಣೆಯ ರಾಷ್ಟ್ರಗಳಿಗಿಂತ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಇಂಥ ಸಾಧನೆ ಕಷ್ಟ ಎಂದು ಏಷ್ಯಾ ಬಾಹ್ಯಾಕಾಶ ಯೋಜನೆಗಳ ವಿಶ್ಲೇಷಕ ಜೋನ್ ಫ್ರೀಜ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಗೌರವ: ಅತ್ಯಂತ ಸಂತಸದ ಸಂಗತಿ, ನನ್ನನ್ನು ಗುರ್ತಿಸಿದ್ದಲ್ಲ. ಕಡೆಗೂ ಭಾರತದ ಸಾಧನೆಯನ್ನು ಒಪ್ಪಿಕೊಂಡದ್ದಕ್ಕೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ದಕ್ಕಿದ ಮಾನ್ಯತೆ ಎಂದು ಯು.ಆರ್.ರಾವ್ ತಮಗೆ ದೊರೆತ ಮನ್ನಣೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಆಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದ ಅಧ್ಯಕ್ಷರಾಗಿ ಯು.ಆರ್.ರಾವ್ ಸೇವೆ ಸಲ್ಲಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications