ಮೊಬೈಲ್‌ದರ ಸಮರ: ಬಿಎಸ್‌ಎನ್‌ಎಲ್ ದರಗಳಲ್ಲಿ ಶೇ.60ರ ಕಡಿತ
ಮೊಬೈಲ್‌ದರ ಸಮರ: ಬಿಎಸ್‌ಎನ್‌ಎಲ್ ದರಗಳಲ್ಲಿ ಶೇ.60ರ ಕಡಿತ
ಸೆಪ್ಟಂಬರ್ 1ರಿಂದ ನೂತನ ದರಗಳು ಜಾರಿ
ಮೊಬೈಲ್ ಕರೆಗಳಲ್ಲಿ ಶೇ.60ರ ಇಳಿಕೆ ಪ್ರಕಟಿಸಿರುವ ಬಿಎಸ್ನೆನ್ನೆಲ್ ಸ್ಥಳೀಯ ಕರೆಯನ್ನು ಪ್ರತಿ ನಿಮಿಷಕ್ಕೆ 90 ಪೈಸೆಗೆ ಸೀಮಿತಗೊಳಿಸಿದೆ. ಸೆ.1ರಿಂದ ನೂತನ ದರಗಳು ಜಾರಿಗೆ ಬರಲಿವೆ. ಇತರ ಎಲ್ಲ ಕಂಪನಿಗಳಿಗಿಂತಲೂ ನಮ್ಮ ಸೇವೆ ಚೆನ್ನಾಗಿರಬೇಕು ಎನ್ನುವ ಉದ್ದೇಶದಿಂದ ಈ ದರ ಕಡಿತ ಪ್ರಕಟಿಸುತ್ತಿದ್ದೇವೆ ಎಂದು ಬಿಎಸ್ಸೆನ್ನೆಲ್ ಕಾರ್ಯಕಾರಿ ಆಡಳಿತ ನಿರ್ದೇಶಕ ವಿ.ಪಿ.ಸಿನ್ಹಾ ತಿಳಿಸಿದ್ದಾರೆ.
ನೂತನ ದರಗಳು :
- ಮೊಬೈಲ್‌ನಿಂದ ಮೊಬೈಲ್‌ಗೆ ಮಾಡುವ ಸ್ಥಳೀಯ ಕರೆ- 2.20 ರು.ನಿಂದ 90 ಪೈಸೆಗೆ ಇಳಿಕೆ.
- ಪ್ರತಿ ನಿಮಿಷದ ಎಸ್‌ಟಿಡಿ ದರ 2.40 ರು.ನಿಂದ 2 ರು.ಗೆ.
- 100 ಕಿಮೀ ವ್ಯಾಪ್ತಿಯ ಸ್ಥಿರ ದೂರವಾಣಿ, ಪ್ರತಿ ಕಾಲ್‌ಗೆ 1.20 ರು.
- 200 ಕಿಮೀ ವ್ಯಾಪ್ತಿಯ ಎಸ್‌ಟಿಡಿ ದರ -2.40 ರು.
ಮುಖಪುಟ / ವಾರ್ತೆಗಳು












Click it and Unblock the Notifications