ವೇತನ ಪರಿಷ್ಕರಣೆ ಒತ್ತಾಯಿಸಿ ಆ.24 ಬ್ಯಾಂಕ್‌ ನೌಕರರಿಂದ ಮುಷ್ಕರ

ವೇತನ ಪರಿಷ್ಕರಣೆ ಒತ್ತಾಯಿಸಿ ಆ.24 ಬ್ಯಾಂಕ್‌ ನೌಕರರಿಂದ ಮುಷ್ಕರ
10 ಲಕ್ಷಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಭಾಗಿ, ಬ್ಯಾಂಕ್‌ ಸೇವೆ ಸಂಪೂರ್ಣ ಸ್ಥಗಿತ ?

ಬೆಂಗಳೂರು : ವೇತನ ಪರಿಷ್ಕರಣೆಗೆ ಒತ್ತಾಯಿಸಿ ಆ.24ರ ಮಂಗಳವಾರ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಬ್ಯಾಂಕ್‌ ನೌಕರರು 1 ದಿನದ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಮಂಗಳವಾರ ಬ್ಯಾಂಕಿಂಗ್‌ ಸೇವೆ ಸಂಪೂರ್ಣ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆಯಿದೆ.

27 ರಾಷ್ಟ್ರೀಯ ಬ್ಯಾಂಕುಗಳು ಹಾಗೂ 30 ಖಾಸಗಿ ಬ್ಯಾಂಕುಗಳು ಮಂಗಳವಾರದ ಮುಷ್ಕರದಲ್ಲಿ ಭಾಗವಹಿಸಲಿವೆ. ಸುಮಾರು 10 ಲಕ್ಷ ನೌಕರರು ಆ.24ರಂದು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಬ್ಯಾಂಕ್‌ ಅಧಿಕಾರಿಗಳ ರಾಷ್ಟ್ರೀಯ ಸಂಘದ ಪ್ರಕಟಣೆ ತಿಳಿಸಿದೆ.

ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆಯ ವಿಷಯ ನೆನೆಗುದಿಗೆ ಬಿದ್ದಿದೆ. 2002ರ ನವಂಬರ್‌ 1ರಿಂದ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಾತುಕತೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ . ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಭಾರತೀಯ ಬ್ಯಾಂಕುಗಳ ಸಂಘದ ಅನಾಸಕ್ತಿಯನ್ನು ಖಂಡಿಸಿ ಮುಷ್ಕರ ನಡೆಸಲಾಗುತ್ತಿದೆ. ಈ ಮುಷ್ಕರಕ್ಕೆ ಜಗ್ಗದಿದ್ದಲ್ಲಿ ಸೆಪ್ಟಂಬರ್‌ ತಿಂಗಳಲ್ಲಿ ಎರಡು ದಿನಗಳ ಮುಷ್ಕರ ನಡೆಸಲಾಗುವುದು ಎಂದು ಪ್ರಕಟಣೆ ಎಚ್ಚರಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+