‘ಭೂಮಿ’ ವಿಸ್ತರಣೆ ; 2000 ಕಿಯೋಸ್ಕ್ ಸ್ಥಾಪನೆಗೆ ಸರ್ಕಾರ ನಿರ್ಧಾರ
‘ಭೂಮಿ’ ವಿಸ್ತರಣೆ ; 2000 ಕಿಯೋಸ್ಕ್ ಸ್ಥಾಪನೆಗೆ ಸರ್ಕಾರ ನಿರ್ಧಾರ
ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕಿಯೋಸ್ಕ್‌ಗಳ ಸ್ಥಾಪನೆ, ರೈತರಿಗೆ ಸರಳ ವಿಧಾನದಿ ಭೂದಾಖಲೆ ಲಭ್ಯ.
ಭೂಮಿ ಯೋಜನೆಯ ವಿಸ್ತರಣೆಯ ಅಂಗವಾಗಿ ರಾಜ್ಯದಲ್ಲಿ 2000 ಡಿಜಿಟಲ್ ಇಂಟರ್‌ಫೇಸ್ ಕೇಂದ್ರಗಳನ್ನು ತೆರೆಯಲಾಗುವುದು. ಇದರಿಂದ ರೈತರು ತಮ್ಮ ಭೂದಾಖಲೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ಕಂದಾಯ ಸಚಿವ ಎಂ.ಪಿ.ಪ್ರಕಾಶ್ ಆ.19ರ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಕಿಯೋಸ್ಕ್‌ಗಳನ್ನು ಪ್ರಾರಂಭಿಸಲಾಗುವುದು. ಇದರಿಂದಾಗಿ ರೈತರು ಜಿಲ್ಲಾ ಕೇಂದ್ರಗಳಿಗೆ ಅಲೆಯುವುದು ತಪ್ಪುತ್ತದೆ. ಕಂಪ್ಯೂಟರ್ ಜ್ಞಾನ ಹೊಂದಿರುವ ನಿರುದ್ಯೋಗಿ ಯುವಕರನ್ನು ಕಿಯೋಸ್ಕ್‌ಗಳ ನಿರ್ವಹಣೆಗೆ ನೇಮಿಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ 250 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಕಾಶ್ ಹೇಳಿದರು.
ಭೂದಾಖಲೆಗಳನ್ನು ಪಡೆಯಲು ನೀಡಬೇಕಾಗಿರುವ ಶುಲ್ಕ 15 ರುಪಾಯಿಗಳನ್ನು ಏಪ್ರಿಲ್ 2005 ರಿಂದ 10 ರುಪಾಯಿಗೆ ಇಳಿಸಲಾಗುವುದು ಎಂದು ಸಚಿವ ಎಂ.ಪಿ. ಪ್ರಕಾಶ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications