‘ಮೈಸೂರು ಸಿಲ್ಕ್’ ಪೇಟೆಂಟ್‌ಗೆ ರಾಜ್ಯ ರೇಷ್ಮೆ ಅಭಿವೃದ್ಧಿಮಂಡಲಿ ಯತ್ನ
‘ಮೈಸೂರು ಸಿಲ್ಕ್’ ಪೇಟೆಂಟ್‌ಗೆ ರಾಜ್ಯ ರೇಷ್ಮೆ ಅಭಿವೃದ್ಧಿಮಂಡಲಿ ಯತ್ನ
ರಾಜ್ಯದ ಸಾಂಸ್ಕೃತಿಕ ಆಸ್ತಿ ರಕ್ಷಿಸಿಕೊಳ್ಳಲು ಸಂಕಲ್ಪ
ಮಂಡಲಿಗೆ ಪೇಟೆಂಟ್ ದೊರೆತಲ್ಲಿ ಕೆಎಸ್‌ಐಸಿ ಸೀರೆಗಳನ್ನು ಹೊರತುಪಡಿಸಿ ವಿಶ್ವದ ಯಾವುದೇ ಭಾಗದಲ್ಲಿ ತಯಾರಾಗುವ ರೇಷ್ಮೆ ಸೀರೆಗಳಿಗೆ ಮೈಸೂರ್ ಸಿಲ್ಕ್ ಎಂದು ಹೆಸರಿಸುವಂತಿಲ್ಲ . ಸಿ.ಐ.ಐ ಆಯೋಜಿಸಿದ್ದ ಸ್ಥಳೀಯ ಸಂಪತ್ತುಗಳ ಸಂರಕ್ಷಣೆ ಕುರಿತ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಂಡಲಿಯ ನಿಯಂತ್ರಣಾಧಿಕಾರಿ ಎಸ್.ಎನ್.ಮೈಥಿ ಈ ವಿಚಾರ ತಿಳಿಸಿದ್ದಾರೆ.
ರಾಜ್ಯದ ಸಾಂಸ್ಕೃತಿಕ ಆಸ್ತಿಯಾಗಿರುವ ಮೈಸೂರು ಸಿಲ್ಕ್‌ನ ಸಂರಕ್ಷಣೆಗಾಗಿ ಈ ನಿರ್ಧಾರ ಕೈಗೊಂಡಿದ್ದು, ಮೂರು ಅಥವಾ ನಾಲ್ಕು ತಿಂಗಳೊಳಗೆ ಪೇಟೆಂಟ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಇದರಿಂದಾಗಿ ಮೈಸೂರು ಸಿಲ್ಕ್ ಗುಣಮಟ್ಟ ಕ್ಕೆ ಬೇಡಿಕೆ ಹೆಚ್ಚಲಿದೆ. ಅಲ್ಲದೇ ನಿರ್ದಿಷ್ಟವಾಗಿ ಗುರ್ತಿಸಲ್ಪಟ್ಟು ಬ್ರಾಂಡ್ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಮೈಥಿ ಹೇಳಿದರು.
ಈಗಾಗಲೇ ಬಾಸುಮತಿ, ತುಳಸಿ, ಅರಿಶಿಣ ಸೇರಿದಂತೆ ಅನೇಕ ನಮ್ಮ ನೆಲದ ವಸ್ತುಗಳ ಪೇಟೆಂಟ್ ಪರಭಾರೆಯಾಗಿದೆ. ಮೈಸೂರು ಸಿಲ್ಕ್ ದಕ್ಕೀತೆ ? ಆ ಪ್ರಯತ್ನವಂತೂ ನಡೆಯುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications