ಬ್ರಿಟನ್-ಯುರೋಪ್ ಭಾರತೀಯರಿಗೆ ‘ಡಿ.ಡಿ’ ಸದ್ಯದಲ್ಲೇ ಸಮೀಪ
ಬ್ರಿಟನ್-ಯುರೋಪ್ ಭಾರತೀಯರಿಗೆ ‘ಡಿ.ಡಿ’ ಸದ್ಯದಲ್ಲೇ ಸಮೀಪ
ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ಪಂಜಾಬಿಯಲ್ಲಿ ಕಾರ್ಯಕ್ರಮ. ಕನ್ನಡ ?
ಬ್ರಿಟನ್ ಹಾಗೂ ಯುರೋಪ್‌ನಲ್ಲಿ ನ ಭಾರತೀಯರನ್ನು ತಲುಪುವ ಉದ್ದೇಶದಿಂದ ವಿದೇಶಿ ಚಾನಲ್ ಒಂದನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ದೂರದರ್ಶನ ಕಾರ್ಯಪ್ರವೃತ್ತವಾಗಿದೆ. ಈ ಚಾನಲ್ ಕೆಲವೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ನವೀನ್ ಚಾವ್ಲ ತಿಳಿಸಿದ್ದಾರೆ.
ಲಂಡನ್‌ನಿಂದ ಸುದ್ದಿ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ದೂರದರ್ಶನ ಪ್ರಸಾರ ಮಾಡಲಿದೆ. ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು ಹಾಗೂ ಪಂಜಾಬಿ ಭಾಷೆಗಳಲ್ಲಿ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಚಾವ್ಲಾ ಹೇಳಿದರು.
ವಿದೇಶಿ ಚಾನಲ್ ಪ್ರಾರಂಭದ ಸಾಧಕಬಾಧಕಗಳ ಅಧ್ಯಯನಕ್ಕಾಗಿ ಚಾವ್ಲಾ ಇತ್ತೀಚೆಗಷ್ಟೇ ಲಂಡನ್ ಪ್ರವಾಸ ಕೈಗೊಂಡಿದ್ದರು. ಪ್ರಸ್ತುತ ಕೆಲವೇ ಕೆಲವು ಭಾರತೀಯ ಖಾಸಗಿ ಚಾನಲ್‌ಗಳು ವಿದೇಶದಲ್ಲೂ ಪ್ರಸಾರ ಆರಂಭಿಸಿವೆ. ಕನ್ನಡದ ಉದಯ ಟೀವಿ ಇತ್ತೀಚೆಗಷ್ಟೇ ಅಮೆರಿಕಾಗೆ ಪದಾರ್ಪಣ ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications