ಸಿಇಟಿ ಗೊಂದಲಗಳಿಂದ ಕಂಗೆಟ್ಟ ಬೆಂಗಳೂರಿನ ವಿದ್ಯಾರ್ಥಿನಿ ಆತ್ಮಹತ್ಯೆ
ಸಿಇಟಿ ಗೊಂದಲಗಳಿಂದ ಕಂಗೆಟ್ಟ ಬೆಂಗಳೂರಿನ ವಿದ್ಯಾರ್ಥಿನಿ ಆತ್ಮಹತ್ಯೆ
ವೈದ್ಯಕೀಯ ಮೆರಿಟ್ ಸೀಟು ಕೈತಪ್ಪುವ ಆತಂಕದಿಂದ ಬದುಕಿಗೆ ವಿದಾಯ
ಪ್ರತಿಭಾ ಎನ್ನುವ 18 ವರ್ಷದ ವಿದ್ಯಾರ್ಥಿನಿ ವೈದ್ಯಕೀಯ ಸೀಟು ಕೈತಪ್ಪುವ ಆತಂಕದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾಳೆ. ಬಿಎಂಎಸ್ ಕಾಲೇಜಿನ ಈ ವಿದ್ಯಾರ್ಥಿನಿ ಸಿಇಟಿ ಮೆರಿಟ್ ಪಟ್ಟಿ ಬದಲಾದ ಕುರಿತು ತೀವ್ರ ಆತಂಕಕ್ಕೊಳಗಾಗಿದ್ದಳು. ಮೆರಿಟ್ ಸೀಟು ಕೈ ತಪ್ಪುವ ಭಯ ಹಾಗೂ ಪೇಮೆಂಟ್ ಸೀಟು ಪಡೆಯಲಾಗದ ಅಸಹಾಯಕತೆಯಿಂದ ಕಂಗೆಟ್ಟ ಆಕೆ ಆತ್ಯಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಾಳ ತಂದೆ ಆಟೋ ಚಾಲಕ ಶ್ರೀನಿವಾಸ್ ಮಗಳ ಆತ್ಯಹತ್ಯೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಸಿಇಟಿ ಗೊಂದಲಗಳಿಂದಾಗಿ ತಮ್ಮ ಮಗಳು ಹತಾಶೆಗೊಳಗಾಗಿದ್ದಳು ಎಂದು ಶ್ರೀನಿವಾಸ್ ದೂರಿನಲ್ಲಿ ತಿಳಿಸಿದ್ದಾರೆ.
ಸಿಇಟಿಯಲ್ಲಿ 16000 ರ್ಯಾಂಕ್ ಹೊಂದಿದ್ದ ಪ್ರತಿಭಾ ಮೆರಿಟ್ ಸೀಟು ಗಿಟ್ಟಿಸುವ ಆಸೆ ಹೊಂದಿದ್ದಳು. ಆದರೆ ಸರ್ಕಾರ ಹಾಗೂ ಖಾಸಗಿ ಆಡಳಿತ ಮಂಡಳಿಗಳ ನಡುವಿನ ತಿಕ್ಕಾಟದಲ್ಲಿ ಆಕೆಯ ಆಸೆಗಳು ಮಣ್ಣುಪಾಲಾಗಿವೆ. ರಾಜ್ಯದ 200 ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಸುಮಾರು 40 ಸಾವಿರ ವೈದ್ಯಕೀಯ-ಇಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಸೀಟುಗಳಿವೆ.
ಈ ನಡುವೆ ರಾಜ್ಯ ಸರ್ಕಾರದ ಶೇ.75 : 25 ಸೀಟು ಹಂಚಿಕೆ ಅನುಪಾತದ ಶಾಸನವನ್ನು ಪ್ರಶ್ನಿಸಿ ಕಾಮೆಡ್-ಕೆ ಸಲ್ಲಿಸಿರುವ ತಕರಾರು ಅರ್ಜಿ ಸುಪ್ರಿಂಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆಗೆ ಬರಲಿದೆ. ಸುಪ್ರಿಂಕೋರ್ಟ್ ತೀರ್ಪಿನ ಕುರಿತು ಕೂಡ ವಿದ್ಯಾರ್ಥಿಗಳು ಚಾತಕದಂತಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications