ಶ್ರಾವಣ ಕೊಡುಗೆ: ಕೆಎಸ್ಸಾರ್ಟಿಸಿ-ಬಿಎಂಟಿಸಿ ಪ್ರಯಾಣದರ ದುಬಾರಿ
ಶ್ರಾವಣ ಕೊಡುಗೆ: ಕೆಎಸ್ಸಾರ್ಟಿಸಿ-ಬಿಎಂಟಿಸಿ ಪ್ರಯಾಣದರ ದುಬಾರಿ
ಭಾನುವಾರದಿಂದಲೇ ದರ ಹೆಚ್ಚಳ ಜಾರಿಗೆ...
ಶೇ.8ರಿಂದ 10ರಷ್ಟು ಪ್ರಯಾಣ ದರವನ್ನು ಹೆಚ್ಚಿಸಲಾಗುವುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಘಟಕಗಳಲ್ಲೂ ಏಕಕಾಲದಲ್ಲಿ ದರ ಹೆಚ್ಚಳ ಜಾರಿಗೆ ಬರಲಿದೆ. ಬರದ ಕಾರಣದಿಂದಾಗಿ ಕಳೆದೊಂದು ವರ್ಷದಿಂದ ದರ ಪರಿಷ್ಕರಣೆ ನಡೆದಿರಲಿಲ್ಲ . ಆದರೆ ಡೀಸೆಲ್ ಬೆರೆ ಏರಿರುವುದರಿಂದ ಪ್ರಯಾಣ ದರ ಬದಲಾವಣೆಗೆ ಅನಿವಾರ್ಯ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.
2003ರಲ್ಲಿ ಬಸ್ ಪ್ರಯಾಣ ದರ ಏರಿಕೆಯಾದಾಗ ಡೀಸೆಲ್ ಬೆಲೆ ಲೀಟರ್‌ಗೆ 24.15 ರುಪಾಯಿ ಇತ್ತು . ಈಗ ಲೀಟರ್‌ಗೆ 26.30 ರುಪಾಯಿಯಂತೆ ಕೆಎಸ್‌ಆರ್‌ಟಿಸಿಗೆ ಡೀಸೆಲ್ ದೊರೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೆಎಸ್‌ಆರ್‌ಟಿಸಿ ಪ್ರಯಾಣದರ ಮಾತ್ರವಲ್ಲದೆ, ಆ.8ರ ಭಾನುವಾರದಿಂದ ಜಾರಿಯಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೂಡ ಪ್ರಯಾಣದರಗಳನ್ನು ಹೆಚ್ಚಿಸಿದೆ. ಬಿಎಂಟಿಸಿ ಪ್ರಯಾಣದರ ಶೇ.3ರಿಂದ 4ರಷ್ಟು ದುಬಾರಿಯಾಗಲಿದೆ. ವಾರ್ಷಿಕ 21 ಕೋಟಿ ರುಪಾಯಿ ಹೊರೆ ತಗ್ಗಿಸಲು ಈ ಹೇರಿಕೆ ಅನಿವಾರ್ಯ ಎಂದು ಬಿಎಂಟಿಸಿ ಪ್ರಕಟಣೆ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications