ಬಿಎಸ್ಸೆನ್ನೆಲ್ 10000 ಸಿಂ ಬಿಡುಗಡೆ; ಸೋಮವಾರ ಮತ್ತೆ ನೋಂದಣಿ
ಬಿಎಸ್ಸೆನ್ನೆಲ್ 10000 ಸಿಂ ಬಿಡುಗಡೆ; ಸೋಮವಾರ ಮತ್ತೆ ನೋಂದಣಿ
ಆಗಸ್ಟ್ 6- 7 ಬೆಂಗಳೂರಿನಲ್ಲಿ 10 ಸಾವಿರ ಸಿಮ್‌ಕಾರ್ಡ್ ಮಾರಾಟ
ಆಗಸ್ಟ್ 6 ಹಾಗೂ 7 ರಂದು ಬೆಂಗಳೂರಿನಲ್ಲಿ 10 ಸಾವಿರ ಸಿಮ್‌ಕಾರ್ಡ್‌ಗಳನ್ನು ಮಾರಾಟ ಮಾಡಲಾಗುವುದು. ಇಷ್ಟೇ ಅಲ್ಲ , ಪ್ರಿಪೇರ್ಯ್ಡ್ ಕಾರ್ಡ್‌ಗಳಿಗಾಗಿ ಸೋಮವಾರ (ಆ.9) ನೋಂದಣೆ ಮಾಡಿಕೊಳ್ಳಲಾಗುವುದು. ಈ ನೋಂದಣಿದಾರರಿಗೆ ಆಗಸ್ಟ್ 12, 13 ಹಾಗೂ 16ರಂದು ಸಿಮ್‌ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಬೆಂಗಳೂರು ಟೆಲಿಕಾಂ ಜಿಲ್ಲೆಯ ಬಿಎಸ್‌ಎನ್‌ಎಲ್ ಅಧಿಕಾರಿ ಪಿ.ಗಣೇಶ್ ತಿಳಿಸಿದ್ದಾರೆ.
ನೋಂದಣೆ ಮಾಡಿದ ಪ್ರತಿಯಾಬ್ಬ ಗ್ರಾಹಕನಿಗೂ ಒಂದು ಟೋಕನ್ ನೀಡಲಾಗುವುದು. ಆ ಟೋಕನ್‌ನಲ್ಲಿ ಸಿಮ್‌ಕಾರ್ಡ್ ನೀಡುವ ಸಮಯ ಹಾಗೂ ದಿನವನ್ನು ನಮೂದಿಸಲಾಗಿರುತ್ತದೆ. ಪ್ರತಿ ಗ್ರಾಹಕ ಕೇಂದ್ರದಲ್ಲಿ 1 ಸಾವಿರ ನೋಂದಣೆಗಳಿಗೆ ಮಾತ್ರ ಅವಕಾಶವಿದೆ ಎಂದು ಗಣೇಶ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications