‘6 ವರ್ಷಗಳಲ್ಲಿ 100 ಕೋಟಿ ದಾಟಲಿರುವ ಕಂಪ್ಯೂಟರ್ ಗ್ರಾಹಕರು’
‘6 ವರ್ಷಗಳಲ್ಲಿ 100 ಕೋಟಿ ದಾಟಲಿರುವ ಕಂಪ್ಯೂಟರ್ ಗ್ರಾಹಕರು’
ಭಾರತ, ಚೀನಾ, ರಷ್ಯಾದಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಲಿದೆ -ಮೈಕ್ರೊಸಾಫ್ಟ್ ಸಿಇಒ
ಭಾರತ, ಚೀನಾ ಹಾಗೂ ರಷ್ಯಾಗಳಲ್ಲಿ ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದ್ದು , ವಿಶ್ವಾದ್ಯಂತ ಕಂಪ್ಯೂಟರ್ ಬಳಕೆದಾರರ ಸಂಖ್ಯೆ 2010ರೊಳಗೆ 100 ಕೋಟಿ (1 ಬಿಲಿಯನ್) ದಾಟಲಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸ್ಟೀವ್ ಬಾಲ್ಮರ್ ಹೇಳಿರುವುದಾಗಿ CNET News.com ವರದಿ ಮಾಡಿದೆ.
ಮೈಕ್ರೋಸಾಫ್ಟ್‌ನ ಉದ್ಯೋಗಿಯಾಬ್ಬರಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿನ ಬಾಲ್ಮರ್ ಅಭಿಪ್ರಾಯಗಳನ್ನು ಸಿಎನ್‌ಇಟಿ ಉಲ್ಲೇಖಿಸಿದೆ. ಪರ್ಸನಲ್ ಕಂಪ್ಯೂಟರ್ ಬಳಕೆದಾರರ ಸಂಖ್ಯೆ 600 ಮಿಲಿಯನ್‌ಗೂ ಹೆಚ್ಚಾಗಲು 20ಕ್ಕೂ ಹೆಚ್ಚು ವರ್ಷ ಬೇಕಾಯಿತು. ಆದರೆ 2010ರೊಳಗೆ ಈ ಸಂಖ್ಯೆ 1 ಬಿಲಿಯನ್ ಮುಟ್ಟುತ್ತದೆಂದು ಅಂದಾಜಿಸಿದ್ದೇನೆ. ಮಾರುಕಟ್ಟೆಯ ಪರಿಸ್ಥಿತಿ ಹಾಗೂ ಅವಕಾಶಗಳ ಸಾಧ್ಯತೆಗಳಲ್ಲಿನ ಬದಲಾವಣೆಗಳೇ ಈ ಹೆಚ್ಚಳಕ್ಕೆ ಕಾರಣವಾಗಲಿವೆ ಎಂದು ಬಾಲ್ಮರ್ ಹೇಳಿದ್ದಾರೆ.
ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದರೂ ಭಾರತ, ಚೀನಾ ಹಾಗೂ ರಷ್ಯಾಗಳಲ್ಲಿ ಕಂಪ್ಯೂಟರ್ ಮಾರುವುದು ಸುಲಭವಲ್ಲ . ಬಡತನ, ಅನಿಯಮಿತ ವಿದ್ಯುತ್ ಸರಬರಾಜು, ಭಾಷಾ ವೈವಿಧ್ಯತೆ, ಸ್ಥಳೀಯ ಶಾಸಕಾಂಗ ವ್ಯವಸ್ಥೆ ಹಾಗೂ ಶಿಕ್ಷಣ, ಮುಂತಾದ ಸಮಸ್ಯೆಗಳು ಈ ದೇಶಗಳಲ್ಲಿವೆ ಎಂದು ಬಾಲ್ಮರ್ ವಿಶ್ಲೇಷಿಸಿದ್ದಾರೆ.
ಎಲ್ಲ ಸಮಸ್ಯೆಗಳ ನಡುವೆಯೂ 2010ರೊಳಗೆ ಪರ್ಸನಲ್ ಕಂಪ್ಯೂಟರ್ ಬಳಕೆದಾರರ ಸಂಖ್ಯೆ 100 ಕೋಟಿ ಮುಟ್ಟುವುದು ಖಚಿತ ಎಂದಿರುವ ಬಾಲ್ಮರ್- 1 ಬಿಲಿಯನ್ ಬಳಕೆದಾರರ ಸಂಖ್ಯೆ ಸಮಸ್ಯೆಯೇ ಅಲ್ಲ . ನಮ್ಮ ಮುಂದಿರುವುದು 2 ಹಾಗೂ 3ನೇ ಬಿಲಿಯನ್‌ದು ಎಂದಿದ್ದಾರೆ.
(ಏಜನ್ಸೀಸ್)
ಮುಖಪುಟ / ಐಟಿ - ಬಿಟಿ












Click it and Unblock the Notifications