Get Updates
Get notified of breaking news, exclusive insights, and must-see stories!

ಸಿಇಟಿ ಪ್ರಗತಿ : ಆ.7ರಿಂದ ಇಂಜಿನಿಯರಿಂಗ್‌ ಕೌನ್ಸೆಲಿಂಗ್‌ ಪ್ರಾರಂಭ

ಸಿಇಟಿ ಪ್ರಗತಿ : ಆ.7ರಿಂದ ಇಂಜಿನಿಯರಿಂಗ್‌ ಕೌನ್ಸೆಲಿಂಗ್‌ ಪ್ರಾರಂಭ
ಆಗಸ್ಟ್‌ 23ರಿಂದ ವೈದ್ಯಕೀಯ ಸೀಟುಗಳಿಗಾಗಿ ಕೌನ್ಸೆಲಿಂಗ್‌

ಬೆಂಗಳೂರು : ಇಂಜಿನಿಯರಿಂಗ್‌ ಸೀಟುಗಳ ಪ್ರವೇಶಕ್ಕಾಗಿ ಆಗಸ್ಟ್‌ 7ರಿಂದ ಕೌನ್ಸೆಲಿಂಗ್‌ ನಡೆಸಲು ಸಿಇಟಿ ಘಟಕ ನಿರ್ಧರಿಸಿದ್ದು , ಇದರೊಂದಿಗೆ ಉನ್ನತ ಶಿಕ್ಷಣಾಕಾಂಕ್ಷಿ ವಿದ್ಯಾರ್ಥಿಗಳ ಆತಂಕ ಕೊಂಚ ಮಟ್ಟಿಗೆ ಕಡಿಮೆಯಾಗಿದೆ.

ಇಂಜಿನಿಯರಿಂಗ್‌ ಕೌನ್ಸೆಲಿಂಗ್‌ ಆಗಸ್ಟ್‌ 7ರಿಂದ ಪ್ರಾರಂಭವಾಗುವುದು. ವೈದ್ಯಕೀಯ ಶಿಕ್ಷಣ ಪ್ರವೇಶದ ಕೌನ್ಸೆಲಿಂಗ್‌ ಆಗಸ್ಟ್‌ 23ರಿಂದ ನಡೆಯಲಿದೆ. ಈ ಕೌನ್ಸೆಲಿಂಗ್‌ನಲ್ಲಿ ಒಂದರಿಂದ ಕೊನೆಯ ರ್ಯಾಂಕ್‌ವರೆಗಿನ ಎಲ್ಲ ಅಭ್ಯರ್ಥಿಗಳು ಭಾಗವಹಿಸಬೇಕು ಎಂದು ಸಿಇಟಿ ವಿಶೇಷಾಧಿಕಾರಿ ಡಿ.ಎನ್‌.ನಾಯಕ್‌ ಮಂಗಳವಾರ (ಆ.3) ತಿಳಿಸಿದ್ದಾರೆ.

ಕೌನ್ಸೆಲಿಂಗ್‌ ಬಗೆಗೆ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಿಳಿಸಲಾಗುವುದಿಲ್ಲ . ಆಗಸ್ಟ್‌ 7ರ ಶನಿವಾರ ಬೆಳಗ್ಗೆ 9ರಿಂದ ಕೌನ್ಸೆಲಿಂಗ್‌ ಪ್ರಾರಂಭವಾಗಲಿದ್ದು , ಅಂದು 1 ರಿಂದ 1300 ರ್ಯಾಂಕ್‌ವರೆಗಿನ ಅಭ್ಯರ್ಥಿಗಳ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ನಾಯಕ್‌ ಹೇಳಿದ್ದಾರೆ.

ಕರ್ನಾಟಕೇತರ ವಿದ್ಯಾರ್ಥಿಗಳಿಗೆ ಸೀಟಿಲ್ಲ : ವೃತ್ತಿ ಶಿಕ್ಷಣ ಪ್ರವೇಶದಲ್ಲಿ ಈ ಬಾರಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಹೊರನಾಡ ವಿದ್ಯಾರ್ಥಿಗಳಿಗೆ ಸಿಇಟಿ ಮೂಲಕ ಪ್ರವೇಶ ನೀಡದಿರಲು ಸಿಇಟಿ ಘಟಕ ನಿರ್ಧರಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+