ನಕಲಿ ನೋಟು : ಮಂಗಳೂರು ಪೊಲೀಸರಿಂದ ಆರು ಮಂದಿ ಬಂಧನ
ನಕಲಿ ನೋಟು : ಮಂಗಳೂರು ಪೊಲೀಸರಿಂದ ಆರು ಮಂದಿ ಬಂಧನ
ಬಂಧಿತರ ಸಂಖ್ಯೆ 12ಕ್ಕೆ , ಜಾಲ ಬಯಲಿಗೆ ತಂದ ಪುತ್ತೂರು ಪೊಲೀಸರು
ಆರು ಮಂದಿಯ ಬಂಧನದೊಂದಿಗೆ ನಕಲಿ ನೋಟು ಜಾಲಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿತರ ಸಂಖ್ಯೆ 12ಕ್ಕೇರಿದೆ. ಶೇಕ್ ಅಬ್ದುಲ್ಲಾ ಹಾಗೂ ರಿಯಾದ್‌ಗೆ ಸಂಬಂಧಿಸಿದ ವ್ಯಕ್ತಿ ಖೋಟಾ ಕರೆನ್ಸಿಗಳನ್ನು ವಿತರಿಸುತ್ತಿರುವ ವಿಷಯ ತನಿಖೆಯಿಂದ ತಿಳಿದುಬಂದಿದೆ. ಕಮೀಷನ್ ಮೇರೆಗೆ ನಡೆಯುವ ಈ ವ್ಯವಹಾರದ ಪ್ರಮುಖ ಏಜೆಂಟ್ ಮುಂಬಯಿಗೆ ಸಂಬಂಧಿಸಿದ ವ್ಯಕ್ತಿ ಎಂದು ಉಪ ಪೊಲೀಸ್ ಅಧೀಕ್ಷಕರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜುಲೈ 27ರಂದು ಪುತ್ತೂರು ಪೊಲೀಸರು ನಕಲಿ ನೋಟು ಜಾಲ ಭೇದಿಸಿದ್ದರು. 6 ಮಂದಿಯನ್ನು ಬಂಧಿಸಿದ್ದ ಪೊಲೀಸರು- 1000 ಹಾಗೂ 500 ರುಪಾಯಿಗಳ ಒಟ್ಟು 73,500 ರುಪಾಯಿ ಮೌಲ್ಯದ ನೋಟುಗಳನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications