ಟ್ರಾಫಿಕ್‌ ಪೊಲೀಸ್‌ ಮಾಮಂದಿರ ಕೈಯಲ್ಲಿ ‘ಸಿಂಪ್ಯೂಟರ್‌’ ಸಿಂಗಾರ

ಟ್ರಾಫಿಕ್‌ ಪೊಲೀಸ್‌ ಮಾಮಂದಿರ ಕೈಯಲ್ಲಿ ‘ಸಿಂಪ್ಯೂಟರ್‌’ ಸಿಂಗಾರ
ಪ್ರಕರಣ ದಾಖಲಿಗೆ ಬಳಕೆ, ದತ್ತಾಂಶ ಶೇಖರಣೆಯೂ ಸಲೀಸು

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಬಂತು ಬೆಂಗಳೂರಿಗೆ, ಸಿಲಿಕಾನ್‌ ವ್ಯಾಲಿಗೆ, ಎಲೆಕ್ಟ್ರಾನಿಕ್‌ ಸಿಟಿಗೆ, ಈಗ ರಸ್ತೆಗಳಿಗೆ !

ಇದೇನು ಸರ್ಕಾರದ ಘೋಷಣೆಯಲ್ಲ . ಯಾವುದೋ ಕಂಪನಿಯ ಜಾಹಿರಾತೂ ಅಲ್ಲ . ಇದು ಬೆಂಗಳೂರಿನ ರಸ್ತೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಫಲ ಸಾಕಾರಗೊಂಡಿರುವ ಸುದ್ದಿ . ವಿಷಯ ಇಷ್ಟು - ಕೈಯಲ್ಲಿ ಸಲೀಸಾಗಿ ಒಯ್ಯಬಲ್ಲಷ್ಟು ಪುಟಾಣಿ ಕಂಪ್ಯೂಟರ್‌ಗಳಾದ ‘ಸಿಂಪ್ಯೂಟರ್‌’ಗಳು ಇದೀಗ ನಗರ ಟ್ರಾಫಿಕ್‌ ಪೊಲೀಸರ ಕೈಯಲ್ಲಿ !

ಜುಲೈ 27ರ ಮಂಗಳವಾರದಿಂದ ಬೆಂಗಳೂರು ನಗರ ಟ್ರಾಫಿಕ್‌ ಪೊಲೀಸರು ‘ಸಿಂಪ್ಯೂಟರ್‌’ ಬಳಕೆಯನ್ನು ಆರಂಭಿಸಿದ್ದಾರೆ. ರಸ್ತೆ ನಿಯಮಗಳನ್ನು ಉ್ಲಲಂಘಿಸುವವರ ವಿರುದ್ಧ ದೂರು ದಾಖಲು ಹಾಗೂ ಇತರ ದತ್ತಾಂಶಗಳ ದಾಖಲಾತಿಗೆ ಸಿಂಪ್ಯೂಟರ್‌ಗಳು ಬಳಕೆಯಾಗಲಿವೆ.

ಸಿಂಪ್ಯೂಟರ್‌ಗಳಲ್ಲಿನ ದತ್ತಾಂಶ ಶೇಖರಣೆಯಿಂದ ಪದೇಪದೇ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಲ್ಲಿ - ಹೆಚ್ಚಿನ ದಂಡ ಹೇರಲು ಟ್ರಾಫಿಕ್‌ ಪೊಲೀಸರಿಗೆ ಅಧಿಕಾರವಿದೆ. ಅಷ್ಟೇ ಅಲ್ಲ , ಚಾಲಕನ ಡ್ರೆೃವಿಂಗ್‌ ಲೈಸೆನ್ಸ್‌ ರದ್ದುಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಬಹುದು.

ಅಂದಹಾಗೆ, ಬೆಂಗಳೂರು ಕಾರ್ಯಪಡೆಯ ‘ರಸ್ತೆ ಶಿಸ್ತು ಯೋಜನೆ’ ಕಾರ್ಯಕ್ರಮದಡಿ ಈ ಸಿಂಪ್ಯೂಟರ್‌ಗಳು ಟ್ರಾಫಿಕ್‌ ಪೊಲೀಸರಿಗೆ ದೊರಕಿವೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+