ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಕ್ಕುದೆಸೆಯಿಲ್ಲದ ರಾಜ್ಯಬಜೆಟ್‌ ಪ್ರವಾಸೋದ್ಯಮಕ್ಕೆ ಮಾರಕ-ಬಿಜೆಪಿ

By Staff
|
Google Oneindia Kannada News

ದಿಕ್ಕುದೆಸೆಯಿಲ್ಲದ ರಾಜ್ಯಬಜೆಟ್‌ ಪ್ರವಾಸೋದ್ಯಮಕ್ಕೆ ಮಾರಕ-ಬಿಜೆಪಿ
ವಿಧಾನ ಪರಿಷತ್‌ನಲ್ಲಿ ಮಾನಸ ಸರೋವರ, ಪಟ್ಟದಕಲ್ಲು, ಬಾದಾಮಿ ಹಾಗೂ ಐಹೊಳೆ

ಬೆಂಗಳೂರು : 2004-05ರ ರಾಜ್ಯ ಬಜೆಟ್‌ಗೆ ದಿಕ್ಕೂ ಇಲ್ಲ ದೆಸೆಯೂ ಇಲ್ಲ ಎಂದು ರಾಜ್ಯ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಡಿ.ಎಚ್‌.ಶಂಕರಮೂರ್ತಿ ಬುಧವಾರ ಟೀಕಿಸಿದರು.

ಆಕರ್ಷಕ ಹಾಗೂ ಉತ್ಪ್ರೇಕ್ಷೆಯ ಅಂಕಿಸಂಖ್ಯೆಗಳ ಮೂಲಕ ಜನತೆಯನ್ನು ಮರುಳುಗೊಳಿಸಲು ರಾಜ್ಯ ಸರ್ಕಾರ ಹೊರಟಿದೆ. ಆದರೆ ಬಜೆಟ್‌ ಒಳಹೊಕ್ಕು ನೋಡಿದರೆ ಅದರ ಪೊಳ್ಳುತನ ಬಯಲಾಗುತ್ತದೆ ಎಂದು ಶಂಕರಮೂರ್ತಿ ಹೇಳಿದರು. ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಹೊಟೇಲ್‌ಗಳು ಹಾಗೂ ವಸತಿಗೃಹಗಳ ಮೇಲಿನ ಲಕ್ಷುರಿ ಶುಲ್ಕವನ್ನು ಶೇ.4ರಿಂದ 12ಕ್ಕೆ ಹೆಚ್ಚಿಸಿರುವ ಕ್ರಮ ಸರಿಯಾದುದಲ್ಲ . ಇದರಿಂದಾಗಿ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದ ಶಂಕರಮೂರ್ತಿ- ಪ್ರವಾಸೋದ್ಯಮಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು, ರಾಜ್ಯದಲ್ಲಿನ ಪ್ರವಾಸೋದ್ಯಮದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಭಾರತ-ಚೀನಾ ಗಡಿಯಲ್ಲಿರುವ ರಮಣೀಯ ಮಾನಸ ಸರೋವರಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ 20 ಸಾವಿರ ರುಪಾಯಿ ಸಹಾಯಧನ ನೀಡುವಂತೆ ಶಂಕರಮೂರ್ತಿ ಒತ್ತಾಯಿಸಿದರು. ಅವರ ಮಾತುಗಳಿಗೆ ಬಿಜೆಪಿ ಸದಸ್ಯ ಡಾ.ಎಂ.ಆರ್‌.ತಂಗಾ ಸಹಮತ ವ್ಯಕ್ತಪಡಿಸಿದರು.

ಚರ್ಚೆಯ ಮಧ್ಯಪ್ರವೇಶಿಸಿದ ಕಾರ್ಯ ನಿರತ ವಿಧಾನ ಸಭಾಧ್ಯಕ್ಷ ವಿ.ಆರ್‌.ಸುದರ್ಶನ್‌- ಐಹೊಳೆ, ಪಟ್ಟದಕಲ್ಲು ಹಾಗೂ ಬಾದಾಮಿಯಂಥ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವದ ಸ್ಥಳಗಳನ್ನು ಹೊಂದಿರುವ ಉತ್ತರ ಕರ್ನಾಟಕದ ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X