ದೂರದರ್ಶನದಲ್ಲಿ ಮರಳಲಿದೆ ಕಾಂಡೋಂ ಜಾಹಿರಾತುಗಳ ವೈಭವ?
ದೂರದರ್ಶನದಲ್ಲಿ ಮರಳಲಿದೆ ಕಾಂಡೋಂ ಜಾಹಿರಾತುಗಳ ವೈಭವ?
ಜಾಹಿರಾತುಗಳಿಗೆ ಅವಕಾಶ ಮಾಡಿಕೊಡಲು ಆರೋಗ್ಯ ಸಚಿವಾಲಯದ ಪ್ರಸ್ತಾವನೆ
ಹೌದು ಎನ್ನುತ್ತಿವೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸುದ್ದಿಮೂಲಗಳು. ಕಾಂಡೋಂ ಜಾಹಿರಾತುಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಆರೋಗ್ಯ ಸಚಿವಾಲಯ ಮಂಡಿಸಿರುವ ಪ್ರಸ್ತಾವನೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಜೈಪಾಲ್‌ರೆಡ್ಡಿ ಬಳಿಯಿದ್ದು - ಅವರು ಈ ವಿಷಯದ ಕುರಿತು ಮುಕ್ತ ಮನಸ್ಸು ಹೊಂದಿದ್ದಾರೆ ಎನ್ನಲಾಗಿದೆ.
ಲೈಂಗಿಕ ಸುರಕ್ಷಣೆ, ಕುಟುಂಬ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾಂಡೋಂ ಜಾಹಿರಾತುಗಳು ಆರ್ಥಿಕ ಮೂಲವಾಗಿಯೂ ದೂರದರ್ಶನಕ್ಕೆ ಫಲಪ್ರದವಾಗಬಲ್ಲವು. ಆ ಕಾರಣದಿಂದಾಗಿ ಇಂಥ ಜಾಹಿರಾತುಗಳಿಗೆ ಅವಕಾಶ ಮಾಡಿಕೊಡಲು ನೂತನ ಸರ್ಕಾರ ಉದ್ದೇಶಿಸಿದೆ.
ಈ ಮುನ್ನ , ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಸುಷ್ಮಾ ಸ್ವರಾಜ್, ಕಾಂಡೋಂ ಜಾಹಿರಾತುಗಳನ್ನು ಖಾಸಗಿ ವಾಹಿನಿಗಳಿಗೆ ಮಾತ್ರ ಸೀಮಿತಗೊಳಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications