Get Updates
Get notified of breaking news, exclusive insights, and must-see stories!

ಸಕ್ರೆಬೈಲು ಆನೆಬಿಡಾರದಲ್ಲಿ 69ವರ್ಷದ ಆನೆಯಮ್ಮನಿಗೆ ಪುತ್ರೋತ್ಸವ

ಸಕ್ರೆಬೈಲು ಆನೆಬಿಡಾರದಲ್ಲಿ 69ವರ್ಷದ ಆನೆಯಮ್ಮನಿಗೆ ಪುತ್ರೋತ್ಸವ
ಇಬ್ಬರು ಆನೆ ಕಂದಮ್ಮಗಳ ಆಗಮನದೊಂದಿಗೆ ಆನೆಗಳ ಸಂಖ್ಯೆ 29ಕ್ಕೆ

ಶಿವಮೊಗ್ಗ : ಇಲ್ಲಿಗೆ 15 ಕಿಮೀ ದೂರದ ಸಕ್ರೆಬೈಲುವಿನಲ್ಲಿನ ಆನೆಗಳ ಬಿಡಾರದಲ್ಲಿ ಬುಧವಾರ ಹೊಸ ಅತಿಥಿಯ ಆಗಮನದ ಸಂತಸ.

ಕಳೆದ 15 ದಿನಗಳ ಹಿಂದಷ್ಟೇ ಆನೆಯಾಂದು ಮರಿಗೆ ಜನ್ಮ ನೀಡಿತ್ತು . ಆ ಸಂತಸದ ಬೆನ್ನಿಗೇ ಜು.21ರ ಬುಧವಾರ ಮತ್ತೊಂದು ಮರಿಯ ಆಗಮನದ ಶುಭವಾರ್ತೆ. ಈ ಬಾರಿ ಕೊಂಚ ವಿಚಿತ್ರದ ಸುದ್ದಿ . ಮರಿಗೆ ಜನ್ಮ ನೀಡಿದ ಆನೆಯಮ್ಮನ ವಯಸ್ಸು ಕೇವಲ 69!

ಕಾವೇರಿ ಎನ್ನುವ 69 ವರ್ಷದ ಈ ತಾಯಿ ಬುಧವಾರ ಜನ್ಮ ನೀಡಿದ್ದು ಗಂಡಾನೆ ಮರಿಗೆ. ಇದು ಆಕೆಗೆ ಎರಡನೇ ಸಂತಾನ. 1969ರಲ್ಲಿ ಕಾವೇರಿ ಮೊದಲ ಬಾರಿಗೆ ತಾಯಿಯಾಗಿದ್ದಳು. ಆಗ ಹುಟ್ಟಿದ್ದ ಹೆಣ್ಣಾನೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕೊಡುಗೆಯಾಗಿ ನೀಡಲಾಗಿತ್ತು .

ಇನ್ನು ಗಂಗೆಯ ಕಥೆ. ಗಂಗೆ ಎನ್ನುವ ಇನ್ನೊಂದು ಆನೆ 15 ದಿನಗಳ ಹಿಂದೆ ಗಂಡಾನೆ ಮರಿಗೆ ಜನ್ಮ ನೀಡಿತ್ತು . ಹೀಗಾಗಿ ಸಕ್ರೆಬೈಲು ಆನೆಗಳ ಬಿಡಾರದಲ್ಲಿ 15 ದಿನಗಳ ಅಂತರದಲ್ಲಿ ಇಬ್ಬರು ಹೊಸ ಅತಿಥಿಗಳು ಆಗಮಿಸಿದಂತಾಗಿದೆ. ಎರಡು ಮರಿಗಳೂ ಸೇರಿದಂತೆ ಪ್ರಸ್ತುತ ಸಕ್ರೆೃಬೈಲಿನಲ್ಲಿ - 19 ಗಂಡಾನೆ ಹಾಗೂ 10 ಹೆಣ್ಣಾನೆಗಳಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+