417ಕೋಟಿ ಗಂಟಿನೊಂದಿಗೆ ರಾಜ್ಯ ಫೋನ್ ಮಾರ್ಕೆಟ್‌ನಲ್ಲಿ ಟಾಟಾ
417ಕೋಟಿ ಗಂಟಿನೊಂದಿಗೆ ರಾಜ್ಯ ಫೋನ್ ಮಾರ್ಕೆಟ್‌ನಲ್ಲಿ ಟಾಟಾ
ಪ್ರಸಕ್ತ ವಿತ್ತ ವರ್ಷದ ಅಂತ್ಯದೊಳಗೆ 6 ಲಕ್ಷ ಗ್ರಾಹಕರ ಹೊಂದುವ ಗುರಿ
ತನ್ನ ದೂರವಾಣಿ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಟಾಟಾ ಟೆಲಿ ಸರ್ವೀಸಸ್ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ 4.5 ಸಂಪರ್ಕಗಳನ್ನು ರಾಜ್ಯದಲ್ಲಿ ಹೊಂದುವ ಗುರಿ ಹೊಂದಲಾಗಿದೆ ಎಂದು ಟಾಟಾ ಟೆಲಿ ಸರ್ವೀಸಸ್‌ನ ಕರ್ನಾಟಕ ವಲಯದ ಮುಖ್ಯಸ್ಥ ಪ್ರಭಾತ್ ಪಾಣಿ ತಿಳಿಸಿದ್ದಾರೆ.
ಪ್ರಸ್ತುತ ನಾವು 1.9 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ. ಈ ಸಂಖ್ಯೆಯನ್ನು ಪ್ರಸಕ್ತ ವಿತ್ತ ವರ್ಷದ ಕೊನೆಗೆ 6 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ನಿಸ್ತಂತು ಹಾಗೂ ಮೊಬೈಲ್ ದೂರವಾಣಿ ಎರಡೂ ಕ್ಷೇತ್ರಗಳಲ್ಲೂ ಪ್ರಗತಿಯತ್ತ ದಾಪುಗಾಲಿಟ್ಟಿದ್ದೇವೆ ಎಂದು ಪಾಣಿ ಹೇಳಿದರು.
ಪ್ರಸ್ತುತ ತ್ರೆೃಮಾಸಿಕದಲ್ಲಿ ಪ್ರೀಪೇಯ್ಡ್ ಸೇವೆಯನ್ನು ಟಾಟಾ ಸರ್ವೀಸಸ್ ಪರಿಚಯಿಸಲಿದೆ. ಕರ್ನಾಟಕ ಮಾತ್ರವಲ್ಲದೆ ಇತರ 6 ರಾಜ್ಯಗಳಲ್ಲೂ ಕಂಪನಿಯ ಚಟುವಟಿಕೆಗಳು ಇನ್ನಷ್ಟು ಚುರುಕಾಗಲಿವೆ ಎಂದು ಪಾಣಿ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications