ಬಣ್ಣ ಭ್ರಾಂತಿ : ಶೇ.90 ಬ್ರಿಟೀಷ್ ಬಿಳಿಯರಿಗೆ ಕಪ್ಪು ಗೆಳೆಯರೇ ಇಲ್ಲ !
ಬಣ್ಣ ಭ್ರಾಂತಿ : ಶೇ.90 ಬ್ರಿಟೀಷ್ ಬಿಳಿಯರಿಗೆ ಕಪ್ಪು ಗೆಳೆಯರೇ ಇಲ್ಲ !
ಅಲ್ಪಸಂಖ್ಯಾಕ ವರ್ಗ ಅರ್ಥೈಸಿಕೊಳ್ಳಲು ಮುಂದಾಗದಿರುವ ಬಿಳಿಯರು
ಹತ್ತರಲ್ಲಿ ಒಂಬತ್ತು ಮಂದಿ ಬ್ರಿಟೀಷ್ ಬಿಳಿಯರು ಅಪ್ಪಟ ಬಣ್ಣದ ಭ್ರಾಂತಿ ಹೊಂದಿದ ಸನಾತನಿಗಳು. ಈ 9 ಮಂದಿಗೆ ಕಪ್ಪು ಅಥವಾ ಅಲ್ಪಸಂಖ್ಯಾತ ವರ್ಗದ ಗೆಳೆಯರೇ ಇಲ್ಲ .
ವರ್ಣ ಸಮಾನತೆ ಆಯೋಗ ಬಿಡುಗಡೆ ಮಾಡಿರುವ ಸಮೀಕ್ಷೆಯ ವರದಿ ಬ್ರಿಟೀಷ್ ಬಿಳಿಯರು ಕಪ್ಪು ಬಣ್ಣದ ಜನರಿಂದ ದೂರವಿರುವ ವಿಷಯವನ್ನು ತಿಳಿಸಿದೆ. ಕಪ್ಪು ಮಂದಿ, ಏಷ್ಯನ್ನರು ಹಾಗೂ ಮುಸ್ಲಿಂರೊಂದಿಗೆ ಗಾಢ ಸ್ನೇಹವನ್ನು ಹೊಂದಲು ಬ್ರಿಟೀಷ್ ಬಿಳಿಯರು ಬಯಸುವುದಿಲ್ಲ ಎಂದೂ ಸಮೀಕ್ಷೆ ತಿಳಿಸಿದೆ.
ಶೇ. 94 ಮಂದಿ ಬಿಳಿಯರು ತಮ್ಮ ಗೆಳೆಯರೆಲ್ಲ ಬಿಳಿಯರೇ ಎಂದಿದ್ದಾರೆ. ಶೇ. 54 ಮಂದಿ ಒಬ್ಬನೇ ಒಬ್ಬ ಕಪ್ಪು ಅಥವಾ ಏಷ್ಯನ್ ವ್ಯಕ್ತಿಯನ್ನು ಆಪ್ತ ಗೆಳೆಯನೆಂದು ಭಾವಿಸುವುದಿಲ್ಲ ಎಂದಿದ್ದಾರೆ. 10ರಲ್ಲಿ 8 ಮಂದಿಗೆ ಮುಸ್ಲಿಂರೊಂದಿಗೆ ಗೆಳೆತನ ಇಷ್ಟವಿಲ್ಲ . ಇನ್ನು 10ರಲ್ಲಿ ಓರ್ವ ಬಿಳಿಯ ಮಾತ್ರ ಹಿಂದೂ ಅಥವಾ ಸಿಖ್ ಜೊತೆ ಮೈತ್ರಿ ಹೊಂದಿದ್ದಾನೆ.
ಬಿಳಿಯರು ಅಲ್ಪಸಂಖ್ಯಾತ ಸಮುದಾಯವನ್ನು ಅರ್ಥೈಸಿಕೊಳ್ಳದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಸಮೀಕ್ಷೆ ನಡೆಸಿದ ಬಳಗದ ಟ್ರೆವೆರ್ ಫಿಲಿಫ್ಸ್ ಉದ್ಘರಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications