‘ ಕರ್ನಾಟಕ ಆನ್‌ಲೈನ್ ಲಾಟರಿ ಮುಕ್ತ ’ ! ರಾಜ ್ಯಬಜೆಟ್ ಘೋಷಣೆ
‘ ಕರ್ನಾಟಕ ಆನ್‌ಲೈನ್ ಲಾಟರಿ ಮುಕ್ತ ’ ! ರಾಜ ್ಯಬಜೆಟ್ ಘೋಷಣೆ
ಕಂಪ್ಯೂಟರ್ ಸಾಫ್ಟ್‌ವೇರ್, ವಿದ್ಯುನ್ಮಾನ ಉಪಕರಣಗಳ ಮೇಲೆ ತೆರಿಗೆ ಹೊರೆ
ಆನ್‌ಲೈನ್ ಲಾಟರಿ ನಿಷೇಧ, ಏಳನೇ ತರಗತಿವರೆಗೆ ಮಧ್ಯಾಹ್ನ ಬಿಸಿಯೂಟ ನೀಡುವ ಅಕ್ಷರ ದಾಸೋಹ ಯೋಜನೆ ವಿಸ್ತರಣೆ ಹಾಗೂ ಶೇ.6ರ ದರದಲ್ಲಿ ಕೃಷಿಕರಿಗೆ ಸಾಲನೀತಿ- ಇವಿಷ್ಟೂ ಹಣಕಾಸು ಖಾತೆಯನ್ನೂ ಹೊಂದಿರುವ ಡೆಪ್ಯುಟಿ ಸಿಎಂ ಸಿದ್ಧರಾಮಯ್ಯ ಸೋಮವಾರ ಮಂಡಿಸಿದ 2004-05ನೇ ಸಾಲಿನ ರಾಜ್ಯ ಬಜೆಟ್‌ನ ಮುಖ್ಯಾಂಶಗಳು. ಈ ಅಂಶಗಳನ್ನು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮಾನ ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ.
ರಾಜ್ಯ ಬಜೆಟ್‌ನಲ್ಲಿ 126 ಉತ್ಪನ್ನಗಳಿಗೆ ಶೇ.1ರಷ್ಟು ತೆರಿಗೆ ವಿನಾಯಿತಿ ಕಲ್ಪಿಸಲಾಗಿದ್ದು , 26 ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.2ರಿಂದ 7ರಷ್ಟು ಹೆಚ್ಚಿಸಲಾಗಿದೆ. ಸಿಗರೇಟ್ ಫಿಲ್ಟರ್, ಕಂಪ್ಯೂಟರ್ ಸಾಫ್ಟ್‌ವೇರ್, ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಗೋಧಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ.
ಆನ್‌ಲೈನ್ ಲಾಟರಿ ಮುಕ್ತ ರಾಜ್ಯ
ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯವನ್ನು ಆನ್‌ಲೈನ್ ಹಾಗೂ ಇಂಟರ್ನೆಟ್ ಲಾಟರಿ ಮುಕ್ತ ರಾಜ್ಯ ಎಂದು ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಆನ್‌ಲೈನ್ ಲಾಟರಿ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 250 ಕೋಟಿ ರುಪಾಯಿಗಳ ಖೋತಾ ಉಂಟಾಗಿದ್ದು , ಈ ಕೊರತೆಯನ್ನು ಇತರ ತೆರಿಗೆಗಳ ಮೂಲಕ ತೂಗಿಸಲಾಗುವುದು. ಅಬಕಾರಿ ನೀತಿಯಮನ್ನು ಪರಿಷ್ಕರಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಎಕ್ಸೈಸ್ ಡ್ಯೂಟಿ ಹಾಗೂ ಲೈಸೆನ್ಸ್ ಫೀ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications