ಹುಬ್ಬಳ್ಳಿ ಶಾಲಾಮಕ್ಕಳಿಗೂ ಇಸ್ಕಾನ್ ‘ಅಕ್ಷಯಪಾತ್ರೆ’ ಊಟ ಯೋಗ
ಹುಬ್ಬಳ್ಳಿ ಶಾಲಾಮಕ್ಕಳಿಗೂ ಇಸ್ಕಾನ್ ‘ಅಕ್ಷಯಪಾತ್ರೆ’ ಊಟ ಯೋಗ
2004ರ ಸೆಪ್ಟಂಬರ್ ವೇಳೆಗೆ ಅವಳಿ ನಗರಗಳ 10 ಸಾವಿರ ವಿದ್ಯಾರ್ಥಿಗಳಿಗೆ ಬಿಸಿಯೂಟ
ಜುಲೈ 17ರಿಂದ ಇಸ್ಕಾನ್‌ನ ಅಕ್ಷಯ ಪಾತ್ರೆ ಯೋಜನೆ ಹುಬ್ಬಳ್ಳಿಯಲ್ಲಿ ಅನುಷ್ಠಾನಕ್ಕೆ ಬರಲಿದೆ. ಹುಬ್ಬಳ್ಳಿಯ 14 ಸರ್ಕಾರಿ ಶಾಲೆಗಳ 3500 ವಿದ್ಯಾರ್ಥಿಗಳು ಅಕ್ಷಯ ಪಾತ್ರೆ ಯೋಜನೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಸವಲತ್ತು ಹೊಂದುವರು. ಯೋಜನೆಯನ್ನು ಮುಂದಿನ ಹಂತದಲ್ಲಿ ಧಾರವಾಡಕ್ಕೂ ವಿಸ್ತರಿಸಲು ಇಸ್ಕಾನ್ ಉದ್ದೇಶಿಸಿದ್ದು , 2004ರ ಸೆಪ್ಟಂಬರ್ ವೇಳೆಗೆ ಅವಳಿ ನಗರಗಳ 10 ಸಾವಿರ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವ ಗುರಿ ಹೊಂದಿದೆ.
ಅಕ್ಷಯ ಪಾತ್ರೆ ಯೋಜನೆಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಮ್ಮ ವೈಯಕ್ತಿಕ ಖಾತೆಯಿಂದ 25 ಲಕ್ಷ ರುಪಾಯಿ ಹಾಗೂ ಪ್ರತಿಷ್ಠಾನದ ವತಿಯಿಂದ 25 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ ಎಂದು ಹುಬ್ಬಳ್ಳಿಯ ಅಕ್ಷರ ಪಾತ್ರೆ ಯೋಜನೆಯ ನಿರ್ವಹಣಾಧಿಕಾರಿ ಯುಧಿಷ್ಠಿರ ಕೃಷ್ಣದಾಸ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications