ಸಿಇಟಿ : ಶೇ. 50 : 50 ಸೀಟು ಹಂಚಿಕೆಗೆ ಸುಪ್ರಿಂ ಕೋರ್ಟ್ ಆದೇಶ
ಸಿಇಟಿ : ಶೇ. 50 : 50 ಸೀಟು ಹಂಚಿಕೆಗೆ ಸುಪ್ರಿಂ ಕೋರ್ಟ್ ಆದೇಶ
ಸಾವಿರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮುಗಿಲ ಮಲ್ಲಿಗೆಯಾದ ಉನ್ನತ ಶಿಕ್ಷಣ
ಶೇ.75: 25ರ ಅನುಪಾತದಲ್ಲಿ ಸೀಟು ಹಂಚಿಕೆಯನ್ನು ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ತಳ್ಳಿಹಾಕಿರುವ ನ್ಯಾಯಪೀಠ, ಶೇ.50: 50ರ ಸೀಟು ಅನುಪಾತವನ್ನು ಅಂತಿಮಗೊಳಿಸಿದೆ. ಸರ್ಕಾರ ನಡೆಸಿರುವ ಸಿಇಟಿ ಮೂಲಕ 50 ವಿದ್ಯಾರ್ಥಿಗಳನ್ನು ತುಂಬಬೇಕು. ಉಳಿದ 50 ಸೀಟುಗಳನ್ನು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಖಾಸಗಿ ಶಿಕ್ಷಣ ಸಂಸ್ಥೆಗಳು (ಕಾಮೆಡ್-ಕೆ) ಭರ್ತಿ ಮಾಡಿಕೊಳ್ಳಬಹುದು ಎಂದು ನ್ಯಾಯಮೂರ್ತಿ ರುಮಾ ಪಾಲ್ ಹಾಗೂ ಅರುಣ್‌ಕುಮಾರ್ ಒಳಗೊಂಡ ಪೀಠ ತಿಳಿಸಿದೆ.
ಸುಪ್ರಿಂಕೋರ್ಟ್ ಆದೇಶದಿಂದಾಗಿ ಈಗಾಗಲೇ ನಡೆಯುತ್ತಿರುವ ಸಿಇಟಿ ಕೌನ್ಸೆಲಿಂಗ್‌ಗೆ ತಡೆ ಉಂಟಾಗಲಿದ್ದು , ಸರ್ಕಾರಿ ಕೋಟಾದಿಂದ ಸೀಟು ಬಯಸಿದ್ದ ಸಾವಿರಾರು ವಿದ್ಯಾರ್ಥಿಗಳ ಆಶೋತ್ತರಗಳು ಮಂಕಾಗಲಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತಶಿಕ್ಷಣ ಮುಗಿಲ ಮಲ್ಲಿಗೆಯಾಗಿ ಪರಿಣಮಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಪ್ರಿಂಕೋರ್ಟ್ ತೀರ್ಪನ್ನು ಪಾಲಿಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಮುಂದಿನ ಸಾಲಿನಲ್ಲಿ ಸುಗ್ರೀವಾಜ್ಞೆ ತರಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications