ಎಲ್ಲ 27 ಜಿಲ್ಲೆಗಳಲ್ಲೂ 2005 ರೊಳಗೆ ಅಂಗವಿಕಲರ ಸಂಸ್ಥೆಯ ಕೇಂದ್ರ
ಎಲ್ಲ 27 ಜಿಲ್ಲೆಗಳಲ್ಲೂ 2005 ರೊಳಗೆ ಅಂಗವಿಕಲರ ಸಂಸ್ಥೆಯ ಕೇಂದ್ರ
1995ರ ಅಂಗವಿಕಲ ವ್ಯಕ್ತಿಗಳ ಕಾಯ್ದೆ ಸವಲತ್ತುಗಳನ್ನು ಅರ್ಹರಿಗೆ ಒದಗಿಸಲು ಆಗ್ರಹ
ಎಲ್ಲ ಜಿಲ್ಲೆಗಳಲ್ಲೂ ಸಂಘದ ಘಟಕಗಳನ್ನು ಸ್ಥಾಪಿಸಲಾಗುವುದು. 2005ರೊಳಗೆ ಈ ಗುರಿ ಸಾಧಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಅಂಗವಿಕಲ ವ್ಯಕ್ತಿಗಳ ಭವನ ನಿರ್ಮಾಣದ ಕಾಮಗಾರಿ ಬೆಂಗಳೂರಿನಲ್ಲಿ ಈಗಾಗಲೇ ಪ್ರಾರಂಭವಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆ.ಸುರೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೈಹಿಕ ಊನತೆ ಹೊಂದಿರುವವರ ಹಿತಾಸಕ್ತಿ ರಕ್ಷಿಸುವ ಕಾರ್ಯ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅತ್ಯಂತ ತುರ್ತಾಗಿ ನಡೆಯಬೇಕಾಗಿದೆ ಎಂದ ಸುರೇಶ್ ಕುಮಾರ್- 1995ರ ಅಂಗವಿಕಲ ವ್ಯಕ್ತಿಗಳ ಕಾಯ್ದೆಯ ಸವಲತ್ತುಗಳನ್ನು ಅರ್ಹರಿಗೆ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಟೀಕಿಸಿದರು. ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವಂತೆ ಸಂಸ್ಥೆ ಪ್ರತಿಭಟನೆ ನಡೆಸಲಿದೆ ಎಂದೂ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications