ಮತ್ತಷ್ಟು ಸಪೂರವಾಗಲು ಮಾರುತಿ ಉದ್ಯೋಗ್‌ ಲಿಮಿಟೆಡ್‌ ಚಿಂತನೆ

ಮತ್ತಷ್ಟು ಸಪೂರವಾಗಲು ಮಾರುತಿ ಉದ್ಯೋಗ್‌ ಲಿಮಿಟೆಡ್‌ ಚಿಂತನೆ
ಮೂರನೇ ಸುತ್ತಿನ ನೌಕರರ ಸವಕಳಿಗೆ ಕಾರು ಕಂಪನಿ ಸಜ್ಜು

ನವದೆಹಲಿ : ಭಾರತದ ಕಾರು ಮಾರುಕಟ್ಟೆಯ ಅಗ್ರಗಾಮಿ ಮಾರುತಿ ಉದ್ಯೋಗ್‌ ಲಿಮಿಟೆಡ್‌ ತನ್ನ ನೌಕರರ ಬಳಗವನ್ನು ಮತ್ತಷ್ಟು ಸಪೂರವಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

ಮಾರುಕಟ್ಟೆಯ ಒತ್ತಡವನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಹಾಗೂ ಸ್ಪರ್ಧೆಯನ್ನು ನಿರ್ವಹಿಸುವ ಹಿನ್ನೆಲೆಯಲ್ಲಿ ಕಾರ್ಮಿಕ ಶಕ್ತಿಯನ್ನು ಕಡಿತಗೊಳಿಸಲು ಮಾರುತಿ ಉದ್ಯೋಗ್‌ ಲಿಮಿಟೆಡ್‌ ಉದ್ದೇಶಿಸಿದ್ದು , ಈ ವಿಷಯವನ್ನು ತನ್ನ 2003-04ರ ವಾರ್ಷಿಕ ಪುಸ್ತಕದಲ್ಲಿ ದಾಖಲಿಸಿದೆ.

ಇತ್ತೀಚಿನ ಜಾಗತಿಕ ಆರ್ಥಿಕ ಹಿಂಜರಿತದ ನಂತರ ಮಾರುತಿ ಕಾರು ಕಂಪನಿ ಕೆಲವು ಸುತ್ತು ನೌಕರರ ಸವಕಳಿ ಮಾಡಿತ್ತು . ಕಂಪನಿ ಮುಂದಿಟ್ಟಿದ್ದ ಸ್ವಯಂ ನಿವೃತ್ತ ಯೋಜನೆಗೆ ಕಳೆದ ವಿತ್ತ ವರ್ಷದಲ್ಲಿ 1251 ನೌಕರರು ಸ್ಪಂದಿಸಿದ್ದರು. 2001-02ರಲ್ಲಿ 1050 ನೌಕರರು ವಿಆರ್‌ಎಸ್‌ ಪಡೆದಿದ್ದರು.

ಇತ್ತೀಚೆಗಷ್ಟೇ ಮಾರುತಿ ಉದ್ಯೋಗ್‌ ಲಿಮಿಟೆಡ್‌ನ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿರುವ ವರದಿಗಳು ಪ್ರಕಟವಾಗಿದ್ದವು. ಹೀಗಿದ್ದೂ ನೌಕರರ ಸಂಖ್ಯೆಯನ್ನು ಕಡಿತಗೊಳಿಸಲು ಹೊರಟಿರುವ ಕಂಪನಿಯ ಕ್ರಮ ವಾಣಿಜ್ಯ ವಲಯದಲ್ಲಿ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+