ಬಿಟಿ ಪಾರ್ಕ್‌ಗೆ 10 ಕೋಟಿ, 6 ತಿಂಗಳಲ್ಲಿ ರಾಷ್ಟ್ರೀಯ ‘ಬಯೋ ನೀತಿ’

ಬಿಟಿ ಪಾರ್ಕ್‌ಗೆ 10 ಕೋಟಿ, 6 ತಿಂಗಳಲ್ಲಿ ರಾಷ್ಟ್ರೀಯ ‘ಬಯೋ ನೀತಿ’
ಐಟಿ-ಬಿಟೆಗೆ ಸರ್ಕಾರದ ಬೆಂಬಲ ಮುಂದುವರಿಕೆ- ಧರ್ಮಸಿಂಗ್‌

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಸರ್ಕಾರದ ಬೆಂಬಲ ಮುಂದುವರೆಯಲಿದೆ ಎಂದು ಘೋಷಿಸಿದ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಜೈವಿಕ ತಂತ್ರಜ್ಞಾನ ಪಾರ್ಕ್‌ಗೆ 10 ಕೋಟಿ ರುಪಾಯಿ ನೆರವು ನೀಡುವುದಾಗಿ ಪ್ರಕಟಿಸಿದರು.

ಜುಲೈ 11ರ ಭಾನುವಾರ ಬೆಂಗಳೂರಿನಲ್ಲಿ ಪ್ರಾರಂಭವಾದ ಮೂರು ದಿನಗಳ ‘ಬೆಂಗಳೂರು ಬಯೋ-2004’ ಮೇಳವನ್ನು ಉದ್ಘಾಟಿಸಿ ಧರ್ಮಸಿಂಗ್‌ ಮಾತನಾಡುತ್ತಿದ್ದರು. ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸರ್ಕಾರ ರೈತರು ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಆದರೆ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೂ ಸರ್ಕಾರದ ಬೆಂಬಲ ಮುಂದುವರೆಯಲಿದೆ ಎಂದು ಧರ್ಮಸಿಂಗ್‌ ಹೇಳಿದರು.

ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಗತಿಗಾಗಿ ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಜವಿಕ ತಂತ್ರಜ್ಞಾನ ಪಾರ್ಕ್‌ಗೆ ರಾಜ್ಯಸರ್ಕಾರ 10 ಕೋಟಿ ರುಪಾಯಿ ನೆರವು ನೀಡಲಿದೆ. ಈ ಪಾರ್ಕ್‌ಗೆ ಕೇಂದ್ರ ಸರ್ಕಾರ 50 ಕೋಟಿ ರುಪಾಯಿ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ ಧರ್ಮಸಿಂಗ್‌- ಉದ್ದೇಶಿತ ಪಾರ್ಕ್‌ ಇನ್‌ಕ್ಯುಬೇಷನ್‌ ಸೇರಿದಂತೆ ಎಲ್ಲ ಆಧುನಿಕ ಸವಲತ್ತು ಹೊಂದಿರುತ್ತದೆ ಎಂದರು.

ಆರು ತಿಂಗಳಲ್ಲಿ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ನೀತಿ

ಮುಂದಿನ 6 ತಿಂಗಳಲ್ಲಿ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ನೀತಿ ಜಾರಿಗೆ ಬರಲಿದೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ.ಕೆ. ಭಾನ್‌ ಹೇಳಿದರು. ಉದ್ದೇಶಿತ ನೀತಿಯು- ಬಯೋತಂತ್ರಜ್ಞಾನದ ಚೌಕಟ್ಟು , ಜೈವಿಕ ತಂತ್ರಜ್ಞಾನ ್ಫಕ್ಷೇತ್ರದ ಅಭಿವೃದ್ಧಿಗಾಗಿ ಸಾರ್ವಜನಿಕ ಹಾಗೂ ಖಾಸಗಿ ಪಾಲ್ಗೊಳ್ಳುವಿಕೆ ಮುಂತಾದ ವಿಷಯಗಳನ್ನು ಒಳಗೊಳ್ಳಲಿದೆ ಎಂದು ಎಂ.ಕೆ.ಭಾನ್‌ ಸುದ್ದಿಗಾರರಿಗೆ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+