ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗ್ರಾಂಸಿಂಗ್‌ ಹೇಳಿಕೆ ಹಿಂದಿನ ಪಿತೂರಿ ಪತ್ತೆಗೆ ತನಿಖೆ-ಧರ್ಮಸಿಂಗ್‌

By Staff
|
Google Oneindia Kannada News

ಸಂಗ್ರಾಂಸಿಂಗ್‌ ಹೇಳಿಕೆ ಹಿಂದಿನ ಪಿತೂರಿ ಪತ್ತೆಗೆ ತನಿಖೆ-ಧರ್ಮಸಿಂಗ್‌
ಬಿಜೆಪಿ ಸದಸ್ಯರದು ಹತಾಶ ವರ್ತನೆ, ಸಂಗ್ರಾಂ ಹೇಳಿಕೆಯ ಹಿಂದೆ ರಾಜಕೀಯ ಶಕ್ತಿಗಳ ಕೈವಾಡ

ಬೆಂಗಳೂರು : ಬಹುಕೋಟಿ ಛಾಪಾ ಪಾಪದ ಪ್ರಮುಖ ಆರೋಪಿ ಕರೀಂ ಲಾಲ ತೆಲಗಿ ಪ್ರಕರಣದಲ್ಲಿ ಹಿರಿಯ ರಾಜಕಾರಣಿಗಳು ತನ್ನನ್ನು ಬಲಿಪಶು ಮಾಡಿದರು ಎನ್ನುವ ನಿವೃತ್ತ ಪೊಲೀಸ್‌ ಅಧಿಕಾರಿ ಸಂಗ್ರಾಂ ಸಿಂಗ್‌ರ ಹೇಳಿಕೆಯ ಹಿಂದಿನ ದುರುದ್ದೇಶ ಹಾಗೂ ಪಿತೂರಿಯನ್ನು ಬಹಿರಂಗಪಡಿಸುವ ಉದ್ದೇಶದಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆಗೆ ಆದೇಶಿಸಿದೆ.

ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಗುಲಾಂ ನಬಿ ಆಜಾದ್‌ ಹಾಗೂ ಡಿ.ಕೆ.ಶಿವಕುಮಾರ್‌ ಮಾಜಿ ಸಚಿವ ರೋಷನ್‌ಬೇಗ್‌ ಅವರನ್ನು ಛಾಪಾ ಪಾಪ ಪ್ರಕರಣದಿಂದ ಮುಕ್ತಗೊಳಿಸಲು ತಮ್ಮನ್ನು ಬಲಿಪಶುವನ್ನಾಗಿ ಮಾಡಿದರು ಎಂದು ಎರಡು ದಿನಗಳ ಹಿಂದಷ್ಟೇ ಸಂಗ್ರಾಂ ಸಿಂಗ್‌ ಆಪಾದಿಸಿದ್ದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌- ಸಂಗ್ರಾಂ ಸಿಂಗ್‌ರ ಹೇಳಿಕೆಯನ್ನು ಸಾರಾ ಸಗಟಾಗಿ ತಿರಸ್ಕರಿಸಿದರು.

ಆರೋಪಗಳನ್ನು ಮಾಡಿರುವ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು , ಹತಾಶೆಯಿಂದ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳು ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಧರ್ಮಸಿಂಗ್‌ ಹೇಳಿದರು.

ಸಂಗ್ರಾಂ ಸಿಂಗ್‌ರ ಹೇಳಿಕೆಯ ಹಿಂದೆ ಇರಬಹುದಾದ ದುರುದ್ದೇಶ ಅಥವಾ ಪಿತೂರಿಯನ್ನು ಪತ್ತೆ ಹಚ್ಚಲು ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಸಂಗ್ರಾಂರ ಹೇಳಿಕೆಯ ಹಿಂದೆ ಕೆಲಸ ಮಾಡಿರುವ ಕೆಲವು ಶಕ್ತಿಗಳ ಕುರಿತು ತಮಗೆ ಮಾಹಿತಿಯಿದೆ ಎಂದು ಧರ್ಮಸಿಂಗ್‌ ಮಾರ್ಮಿಕವಾಗಿ ನುಡಿದರು.

ಸಂಗ್ರಾಂ ಸಿಂಗ್‌ರ ಹೇಳಿಕೆಯ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಗದ್ದಲವೆಬ್ಬಿಸುತ್ತಿರುವ ಬಿಜೆಪಿ ಸದಸ್ಯರ ನಡನವಳಿಕೆಯನ್ನು ತರಾಟೆಗೆ ತೆಗೆದುಕೊಂಡ ಧರ್ಮಸಿಂಗ್‌- ಬಿಜೆಪಿ ಸದಸ್ಯರು ಹತಾಶೆಯಿಂದ ವರ್ತಿಸುತ್ತಿದ್ದಾರೆ ಎಂದರು. ವೀರಪ್ಪನ್‌ ಸೆರೆಯಿಂದ ವರನಟ ರಾಜ್‌ರನ್ನು ಬಿಡಿಸಿಕೊಳ್ಳಲು ಸರ್ಕಾರ ಯಾವುದೇ ಹಣ ನೀಡಿಲ್ಲ ಎಂದೂ ಧರ್ಮಸಿಂಗ್‌ ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X