ವಿಶ್ವವಿಖ್ಯಾತ ‘ಗೋಲಗುಮ್ಮಟ’ಕ್ಕೆ ಶೀಘ್ರದಲ್ಲೇ ಶಬ್ದ-ಬೆಳಕಿನ ಮೆರುಗು

ವಿಶ್ವವಿಖ್ಯಾತ 'ಗೋಲಗುಮ್ಮಟ"ಕ್ಕೆ ಶೀಘ್ರದಲ್ಲೇ ಶಬ್ದ-ಬೆಳಕಿನ ಮೆರುಗು ರಸ್ತೆ ಜಾಲ ಸುಧಾರಣೆಗೆ 3.5 ಕೋಟಿ ರುಪಾಯಿ ಯೋಜನೆ

ಬಿಜಾಪುರ : ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ವಿಶ್ವ ಪ್ರಸಿದ್ಧ ಗೋಲ್‌ಗುಂಬಜ್‌ನ್ನು ಆಕರ್ಷಕಗೊಳಿಸುವ ಯೋಜನೆಗೆ ಮತ್ತೆ ಜೀವ ದೊರೆತಿದೆ.

ಗೋಲ್‌ಗುಂಬಜ್‌ ಪರಿಸರದಲ್ಲಿ ಶಬ್ದ ಹಾಗೂ ಬೆಳಕಿನ ಪ್ರದರ್ಶನವನ್ನು ಶೀಘ್ರವೇ ಏರ್ಪಡಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಗೋಲ್‌ಗುಂಬಜ್‌ಗೆ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ಬಿಜಾಪುರ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶಬ್ದ ಹಾಗೂ ಬೆಳಕಿನ ಪ್ರದರ್ಶನ ಮಾತ್ರವಲ್ಲದೆ, 30 ಲಕ್ಷ ರುಪಾಯಿ ವೆಚ್ಚದಲ್ಲಿ ಆಟದ ರೈಲನ್ನು ಪರಿಚಯಿಸಲಾಗುವುದು. ಇದರಿಂದಾಗಿ ಮಕ್ಕಳಿಗೆ ಗೋಲ್‌ಗುಂಬಜ್‌ನ ಆಕರ್ಷಣೆ ಮತ್ತೂ ಹೆಚ್ಚಲಿದೆ ಎಂದು ಬಸವನಗೌಡ ಹೇಳಿದರು.

ಗೋಲ್‌ಗುಂಬಜ್‌ ಸಂಪರ್ಕಿಸುವ ರಸ್ತೆಜಾಲವನ್ನು ಅಭಿವೃದ್ಧಿಪಡಿಸುವ ಯೋಜನೆಯ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. 3.5 ಕೋಟಿ ರುಪಾಯಿ ಅಂದಾಜಿನ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ. ಗೋಲ್‌ಗುಂಬಜ್‌ ಬಳಿ 1 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರದರ್ಶನಾಲಯವನ್ನು ನಿರ್ಮಿಸುವ ಯೋಜನೆಯೂ ಇದೆ ಎಂದು ಸಂಸದರೊಂದಿಗೆ ಹಾಜರಿದ್ದ ಜಿಲ್ಲಾಧಿಕಾರಿ ಮೊಹಮ್ಮದ್‌ ಮೊಹಸೀನ್‌ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+