ಅಮೆರಿಕಾ ಮೇಲೆ ದಾಳಿಯನ್ನು ಖುದ್ದು ಲ್ಯಾಡೆನ್ ರೂಪಿಸುತ್ತಿದ್ದಾನೆ... !
ಅಮೆರಿಕಾ ಮೇಲೆ ದಾಳಿಯನ್ನು ಖುದ್ದು ಲ್ಯಾಡೆನ್ ರೂಪಿಸುತ್ತಿದ್ದಾನೆ... !
ಹಿರಿಯ ಅಧಿಕಾರಿಯ ಮಾಹಿತಿ ಉಲ್ಲೇಖಿಸಿ ಸಿಎನ್‌ಎನ್ ವರದಿ
ಆಲ್‌ಖ್ವೆ ೖದಾದ ಸಂಭಾವ್ಯ ದಾಳಿಗಳನ್ನು ಖುದ್ದು ಲ್ಯಾಡೆನ್ ರೂಪಿಸುತ್ತಿದ್ದಾನೆ. ಆತನಿಗೆ ಲೆಫ್ಟಿನೆಂಟ್ ಅಯ್ಮನ್ ಆಲ್-ಝವಾಹಿರಿ ನೆರವು ನೀಡುತ್ತಿದ್ದಾನೆ ಎಂದು ಗುಪ್ತಚಾರ ದಳದ ಹಿರಿಯ ಅಧಿಕಾರಿಯ ಮಾಹಿತಿಯನ್ನುಲ್ಲೇಖಿಸಿ ಸಿಎನ್‌ಎನ್ ತಿಳಿಸಿದೆ.
ಈ ಬಾರಿ ಆಲ್‌ಖ್ವೆ ೖದಾದ ದಾಳಿಗಳು ಭಾರೀ ಗುರಿಗಳನ್ನುದ್ದೇಶಿಸಿವೆ. ಈ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಆದರೆ ಸಮಯ, ಸ್ಥಳ ಹಾಗೂ ದಾಳಿಯ ಸ್ವರೂಪದ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ ಎಂದು ಹೋಮ್‌ಲ್ಯಾಂಡ್ ಭದ್ರತಾ ಕಾರ್ಯದರ್ಶಿ ಟಾಮ್ ರಿಡ್ಜ್ ಹೇಳಿದ್ದಾರೆ. ಸಿಐಎ, ಎಫ್‌ಬಿಐನಂಥ ಸಂಸ್ಥೆಗಳೊಂದಿಗೆ ಉಗ್ರರ ಕೃತ್ಯಗಳನ್ನು ವಿಫಲಗೊಳಿಸಲು ನಾವು ಯತ್ನಿಸುತ್ತಿದ್ದೇವೆ ಎಂದು ರಿಡ್ಜ್ ತಿಳಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications