ಪ್ರಯಾಣಿಕರಿಗೆ ಬರೆ: ಶೀಘ್ರವೇ ಕೆಎಸ್ಸಾರ್ಟಿಸಿ ಪ್ರಯಾಣದರ ಹೆಚ್ಚಳ
ಪ್ರಯಾಣಿಕರಿಗೆ ಬರೆ: ಶೀಘ್ರವೇ ಕೆಎಸ್ಸಾರ್ಟಿಸಿ ಪ್ರಯಾಣದರ ಹೆಚ್ಚಳ
ಬಿಎಂಟಿಸಿಗೆ ಪ್ರಸಕ್ತ ವರ್ಷ 1000 ಹೊಸ ಬಸ್ ಸೇರ್ಪಡೆ
ತೈಲ ಬೆಲೆಯಲ್ಲಿ ಉಂಟಾಗಿರುವ ಏರಿಕೆಯಿಂದಾಗಿ ಉಂಟಾಗಿರುವ ನಷ್ಟವನ್ನು ಅಂದಾಜು ಮಾಡಲಾಗಿದ್ದು , ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಂದ ತಿಂಗಳಿಗೆ 12 ಕೋಟಿ ರುಪಾಯಿ ನಷ್ಟವಾಗುತ್ತಿದೆ. ನಾಲ್ಕು ಸಾರಿಗೆ ನಿಗಮಗಳಲ್ಲೂ ಸಮಾನ ಏರಿಕೆ ಸಾಧಿಸುವ ಮೂಲಕ ನಷ್ಟವನ್ನು ತುಂಬುವ ನೀತಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಖರ್ಗೆ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಗುಲ್ಬರ್ಗಾ ಸಾರಿಗೆ ನಿಗಮಕ್ಕೆ ಹೆಚ್ಚುವರಿಯಾಗಿ 200 ಬಸ್‌ಗಳನ್ನು ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದೆ. ಅದೇರೀತಿ, ಪ್ರಸಕ್ತ ವರ್ಷದಲ್ಲಿ 1000 ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದ್ದು , ಈಗಾಗಲೇ 500 ಬಸ್‌ಗಳನ್ನು ಖರೀದಿಸಲಾಗಿದೆ ಎಂದು ಖರ್ಗೆ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications