ಆದಾಯ ತೆರಿಗೆ ಮಿತಿ 1 ಲಕ್ಷಕ್ಕೆ ಏರಿಕೆ, 2005 ಏಪ್ರಿಲ್‌ನೊಳಗೆ ವ್ಯಾಟ್
ಆದಾಯ ತೆರಿಗೆ ಮಿತಿ 1 ಲಕ್ಷಕ್ಕೆ ಏರಿಕೆ, 2005 ಏಪ್ರಿಲ್‌ನೊಳಗೆ ವ್ಯಾಟ್
ಕುಡಿಯುವ ನೀರಿನ ಎಲ್ಲ ಯೋಜನೆಗಳು ರಾಜೀವ್‌ಗಾಂಧಿ ಕುಡಿಯುವ ನೀರು ಯೋಜನೆ ಕಕ್ಷೆಗೆ
ಬಜೆಟ್‌ನಲ್ಲಿ ಪ್ರಸ್ತಾಪವಾದ ಇತರ ಪ್ರಮುಖ ಅಂಶಗಳು :
- ಆದಾಯ ತೆರಿಗೆ ಮಿತಿ 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ.
- ವಿಮಾನ ನಿಲ್ದಾಣ, ಬಂದರು ಹಾಗೂ ಪ್ರವಾಸಿ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳು ಮೇಲ್ದರ್ಜೆಗೆ.
- ಕುಡಿಯುವ ನೀರಿನ ಎಲ್ಲ ಯೋಜನೆಗಳು ರಾಜೀವ್‌ಗಾಂಧಿ ಕುಡಿಯುವ ನೀರು ಯೋಜನೆ ವ್ಯಾಪ್ತಿಗೆ.
- ಆನಂದ್ ಮಾಡೆಲ್ ರೀತಿ ರಾಷ್ಟ್ರೀಯ ತೋಟಗಾರಿಕಾ ನಿಗಮ ಸ್ಥಾಪನೆ.
- ಚೆನ್ನೈ ಬಳಿ 1000 ಕೋಟಿ ರು. ಅಂದಾಜಿನಲ್ಲಿ , ಪ್ರತಿದಿನ 300 ಮಿಲಿಯನ್ ಲೀಟರ್ ನೀರು ಶುದ್ಧೀಕರಣ ಸಾಮರ್ಥ್ಯದ ಘಟಕ.
- ಗುಡ್ಡಗಾಡು, ಪರಿಶಿಷ್ಠ ವರ್ಗದವರು ಸೇರಿದಂತೆ ಬಡ ಜನತೆಗೆ ಸೂರು ಕಲ್ಪಿಸುವ ಇಂದಿರಾ ಆವಾಸ್ ಯೋಜನೆ ಅನುದಾನ 247 ಕೋಟಿ ರುಪಾಯಿಗೆ ಹೆಚ್ಚಳ.
- ಆರ್‌ಬಿಐನಿಂದ ಗ್ರಾಮೀಣ ಗೃಹ ಸಾಲ ಯೋಜನೆ ಪರಿಷ್ಕರಣೆ.
- ಪ್ರಾಥಮಿಕ ಆರೋಗ್ಯ ಸುರಕ್ಷಣೆ, ಸರ್ವಶಿಕ್ಷಾ ಅಭಿಯಾನ, ಕೃಷಿಯಲ್ಲಿ ಬಂಡವಾಳ ಹೂಡಿಕೆ, ಜೈವಿಕ ತಂತ್ರಜ್ಞಾನ ಸೇರಿದಂತೆ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಆದ್ಯತೆ ಹಾಗೂ ಹೆಚ್ಚಿನ ಅನುದಾನ ನೀಡಿಕೆ.
- ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಡ್ಡಿದರದಲ್ಲಿ ಯಥಾಸ್ಥಿತಿ ಪಾಲನೆ.
- ಜಿಪಿಎಫ್ ಬಡ್ಡಿದರದಲ್ಲೂ ಬದಲಾವಣೆಯಿಲ್ಲ .
ಮುಖಪುಟ / ವಾರ್ತೆಗಳು












Click it and Unblock the Notifications