ಛಾಪಾಪಾಪ ತನಿಖೆಗಾಗಿ ಮಾಜಿ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ
ಛಾಪಾಪಾಪ ತನಿಖೆಗಾಗಿ ಮಾಜಿ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ
ಅಮಾನತಿನಲ್ಲಿರುವ ಅಧಿಕಾರಿಯ ಮನೆಗೂ ಸಿಬಿಐ ಮುತ್ತಿಗೆ, ದಾಖಲೆಗಳ ವಶ
ನಿವೃತ್ತ ಎಸಿಪಿ ಸಂಗ್ರಾಂಸಿಂಗ್ ಹಾಗೂ ಅಮಾನತಿನಲ್ಲಿರುವ ಪೊಲೀಸ್ ಇನ್‌ಸ್ಪೆಕ್ಟರ್ ವಲಿ ಬಾಷಾ ಅವರ ನಿವಾಸದ ಮೇಲೆ ಜು.7ರ ಬುಧವಾರ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ಹಲವು ದಾಖಲೆ ವಶಪಡಿಸಿಕೊಂಡರು. ಇಬ್ಬರ ಮೇಲೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ, ಸಾಕ್ಷ್ಯನಾಶದ ಆರೋಪಗಳು ಅವರ ಮೇಲಿವೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಾಂಸಿಂಗ್ ಹಾಗೂ ವಲಿಬಾಷಾ ಅವರ ಮೇಲೆ ಈ ಮುನ್ನ ಇಲಾಖಾ ತನಿಖೆಗೆ ಪೊಲೀಸ್ ಇಲಾಖೆ ಆದೇಶಿಸಿತ್ತು . ಅಮಾನತಿನಲ್ಲಿದ್ದ ಸಂಗ್ರಾಂಸಿಂಗ್ ಕೆಲ ದಿನಗಳ ಹಿಂದಷ್ಟೇ ಸೇವೆಯಿಂದ ನಿವೃತ್ತರಾಗಿದ್ದಾರೆ. ಬಳ್ಳಾರಿಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ವಲಿಬಾಷಾ ಸೇವೆಯಿಂದ ಅಮಾನತುಗೊಂಡಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications