ಅಮೆರಿಕಾದ ಔಟ್‌ಸೋರ್ಸಿಂಗ್ ವಿವಾದ ಬೆಂಗಳೂರಿಗೆ ವರವಾಯ್ತು
ಅಮೆರಿಕಾದ ಔಟ್‌ಸೋರ್ಸಿಂಗ್ ವಿವಾದ ಬೆಂಗಳೂರಿಗೆ ವರವಾಯ್ತು
ಈ ವಿತ್ತೀಯ ವರ್ಷದಲ್ಲಿ 4 ಬಿಲಿಯ, ಅಂದರೆ ಶೇಕಡಾ 46ರ ರಷ್ಟು ವೃದ್ಧಿಸಿದ ಕಾಲ್ ಸೆಂಟರ್ ಆದಾಯ
ಈ ವಿವಾದದಿಂದ ಭಾರತದ ತಜ್ಞರ ಮತ್ತು ಕಡಿಮೆ ದರದ ಕೆಲಸಗಳಿಗೆ ಪ್ರಚಾರ ದೊರಕಿದೆ. ಇದರಿಂದ ಅಮೆರಿಕಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಔಟ್‌ಸೋರ್ಸಿಂಗ್ ಭಾರತಕ್ಕೆ ಹರಿದು ಬಂದಿದೆ. ಆ ಮೂಲಕ ಈ ಕ್ಷೇತ್ರದಲ್ಲಿ ಭಾರತದ ಆದಾಯ ಹೆಚ್ಚಿದೆ ಎಂದು ಅಮೆರಿಕಾದ ಪತ್ರಿಕೆಯಾಂದು ವರದಿ ಮಾಡಿದೆ.
ವಾರದಲ್ಲಿ ಎರಡು-ಮೂರರಂತೆ ಸಾಪ್ಟ್‌ವೇರ್ ಕಂಪೆನಿಗಳು ಬೆಂಗಳೂರಿನಲ್ಲಿ ತಲೆ ಎತ್ತುತ್ತಿವೆ. ಇದರಲ್ಲಿ ವಿದೇಶಿ ಮತ್ತು ಬಹು ರಾಷ್ಟ್ರೀಯ ಕಂಪೆನಿಗಳೂ ಇವೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿಯಲ್ಲಿ ಹೇಳಿದೆ.
ಈ ವಿತ್ತೀಯ ವರ್ಷದಲ್ಲಿ ಕಾಲ್ ಸೆಂಟರ್‌ಗಳ ಆದಾಯ 4 ಬಿಲಿಯ, ಅಂದರೆ ಶೇಕಡಾ 46 ವೃದ್ಧಿಸಿದೆ. ಇದರಿಂದ ಶೇಕಡಾ23ರಷ್ಟು ಉದ್ಯೋಗ ಅವಕಾಶ ಹೆಚ್ಚಿದೆ. ಪ್ರಸ್ತುತ 8,00,000 ಮಂದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಭಾರತದ ನಾಸ್‌ಕಾಂಮ್ (National Association of Software and Service Companies) ಅಂಕಿಅಂಶ ಆಧರಿಸಿ ಪತ್ರಿಕೆ ವರದಿ ಮಾಡಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications