ದೇವೇಗೌಡರಿಂದ ಸೋನಿಯಾಗಾಂಧಿ ರಾಜಕಾರಣಕ್ಕೆ ಫುಲ್‌ಮಾಕ್ಸ್ !
ದೇವೇಗೌಡರಿಂದ ಸೋನಿಯಾಗಾಂಧಿ ರಾಜಕಾರಣಕ್ಕೆ ಫುಲ್‌ಮಾಕ್ಸ್ !
ಸರ್ಕಾರದ ನೀತಿಗಳನ್ನು ರೂಪಿಸುವಲ್ಲಿ ಸೋನಿಯಾ ತಂತ್ರ ಪರಿಣಾಮಕಾರಿ
ರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ ವೃತ್ತಿಪರರು, ತಂತ್ರಜ್ಞರು ಹಾಗೂ ಆರ್ಥಿಕ ತಜ್ಞರನ್ನು ಬಳಸಿಕೊಳ್ಳುತ್ತಿರುವ ಸೋನಿಯಾ ಅವರ ನಡಳಿಕೆ ಅತ್ಯಂತ ಸಮಂಜಸವಾದುದು. ಕೇಂದ್ರದ ಸಂಯುಕ್ತ ಪ್ರಗತಿಪರ ಸರ್ಕಾರದ ಕನಿಷ್ಠ ಕಾರ್ಯಕ್ರಮಗಳ ಜಾರಿಯಲ್ಲೂ ಸೋನಿಯಾ ಪರಿಣಾಮಕಾರಿ ಪಾತ್ರ ವಹಿಸಿದ್ದಾರೆ ಎಂದು ದೇವೇಗೌಡ ಶ್ಲಾಘಿಸಿದರು. ಜೂನ್ 28ರಂದು ಶೃಂಗೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ , ಹಾಸನದಲ್ಲಿ ಸುದ್ದಿಗಾರರೊಂದಿಗೆ ದೇವೇಗೌಡ ಮಾತನಾಡಿದರು.
ಮುಂಬರುವ ಬಜೆಟ್ ಮೇಲೂ ಸೋನಿಯಾ ಪಾತ್ರ ಧನಾತ್ಮಕ ಪರಿಣಾಮ ಬೀರುವುದು ಖಚಿತ. ಈ ಬಜೆಟ್ ಕೃಷಿಪರ ಆಗಿರುವುದೆಂದು ಆಶಿಸಿದ್ದೇನೆ. ಮುಂಬರುವ ದಿನಗಳಲ್ಲಿ ದೇಶ ಗಮನಾರ್ಹ ಬದಲಾವಣೆಗಳನ್ನು ಕಾಣುವುದು ನಿಶ್ಚಿತ. ಆದರೆ ಅಲ್ಪಾವಧಿಯಲ್ಲಿ ಯಾವೊಂದು ಸರ್ಕಾರದಿಂದಲೂ ಅಪಾರ ಸಾಧನೆಯನ್ನು ನಿರೀಕ್ಷಿಸಲಾಗದು ಎಂದು ದೇವೇಗೌಡ ಮಾರ್ಮಿಕವಾಗಿ ನುಡಿದರು.
ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಕುರಿತು ಪ್ರತಿಕ್ರಿಸಿಧಿಯಿಸಿದ ಮಾಜಿ ಪ್ರಧಾನಿ- ಈ ಹೊಂದಾಣಿಕೆ ಅನಿವಾರ್ಯವಾಗಿತ್ತು . ನಮ್ಮ ಮಿತಿಗಳನ್ನು ನಾವು ಅರಿತಿದ್ದೇವೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications