ಹಿರಿಯ ನಾಗರಿಕರು ಹಾಗೂ ವಿಧವೆಯರ ಬೆಂಬಲಕ್ಕಾಗಿ ‘ನನ್ನ ಪೆನ್ಷನ್‌’

ಹಿರಿಯ ನಾಗರಿಕರು ಹಾಗೂ ವಿಧವೆಯರ ಬೆಂಬಲಕ್ಕಾಗಿ ‘ನನ್ನ ಪೆನ್ಷನ್‌’
ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೊಂದು ಸರಳ ಸೂತ್ರ

ತುಮಕೂರು : ಹಿರಿಯ ನಾಗರಿಕರು ಹಾಗೂ ವಿಧವೆಯರಿಗೆ ಸರ್ಕಾರ ನೀಡುವ ಸವಲತ್ತುಗಳ ಅನುಷ್ಠಾನವನ್ನು ಸರಳಗೊಳಿಸುವ ‘ನನ್ನ ಪೆನ್ಷನ್‌’ ಎನ್ನುವ ಸಾಫ್ಟ್‌ವೇರ್‌ (ತಂತ್ರಾಂಶ) ನ್ನು ಡೆಲಿಕ್‌ಸಸ್‌ ಸಾಫ್ಟ್‌ವೇರ್‌ ಇಂಡಿಯಾ ಸಂಸ್ಥೆ ರೂಪಿಸಿದೆ.

ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ತನ್ವೀರ್‌ ಸೇಠ್‌ ‘ನನ್ನ ಪೆನ್ಷನ್‌’ ಸಾಫ್ಟ್‌ವೇರ್‌ ಅನಿವಾರಣಗೊಳಿಸಿದರು. ಪ್ರಸ್ತುತ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿರುವ ಈ ತಂತ್ರಾಂಶವನ್ನು ಎಲ್ಲ ಭಾರತೀಯ ಭಾಷೆಗಳಲ್ಲೂ ದೊರಕಿಸುವ ಕಾರ್ಯ ಚಾಲ್ತಿಯಲ್ಲಿದೆ.

ಸರ್ಕಾರದ ಎಲ್ಲ ಯೋಜನೆಗಳಲ್ಲಿ ‘ನನ್ನ ಪೆನ್ಷನ್‌’ ತಂತ್ರಾಂಶವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಬಿ. ದ್ಯಾಬೇರಿ ಹಾಗೂ ತಹಸಿಲ್ದಾರ್‌ ಬಸವರಾಜು ಭರವಸೆ ನೀಡಿದ್ದಾರೆ. ಈ ತಂತ್ರಾಂಶದ ಮೂಲಕ ಹಿರಿಯ ನಾಗರಿಕರು ಹಾಗೂ ವಿಧವೆಯವರು ತಮ್ಮ ಅರ್ಜಿಯ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ತಂತ್ರಾಂಶವನ್ನು ರೂಪಿಸಿರುವ ಅಕ್ಬರ್‌ ಎಸ್‌.ಅಹಮದ್‌ ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನವನ್ನು ಬಡವರಿಗೆ ಹಾಗೂ ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ತಮ್ಮ ಸಂಸ್ಥೆಯ ಒಂದು ಸಣ್ಣ ಪ್ರಯತ್ನವಿದು. ಇಂಥ ಪ್ರಯತ್ನಗಳನ್ನು ಸಂಸ್ಥೆ ಮುಂದುವರಿಸಲಿದೆ ಎಂದು ಡೆಲಿಕ್‌ಸಸ್‌ನ ಸಿಇಒ ಡಾ.ನಜೀರ್‌ ಅಹಮದ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+