ವಿಜಯ ಮಲ್ಯ ಹೊಸ ಮೋಡಿ: ಕಡಿಮೆ ದರದಿ ವಾಯುಯಾನ ಮಾಡಿ
ವಿಜಯ ಮಲ್ಯ ಹೊಸ ಮೋಡಿ: ಕಡಿಮೆ ದರದಿ ವಾಯುಯಾನ ಮಾಡಿ
ಪ್ರಮಖ ನಗರಗಳಿಗೆ ಸಂಪರ್ಕ ಕಲ್ಪಿಸುವ‘ ಕಿಂಗ್‌ಫಿಶರ್’ ವಾಯು ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಕಾರ್ಯ ನಿರ್ವಹಿಸಲಿದೆ
ಆರಂಭದಲ್ಲಿ 150 ಕೋಟಿ ಬಂಡವಾಳ ಹೂಡಲಿದ್ದೇವೆ. ವಾಯು ಸಾರಿಗೆ ಸ್ಥಾಪಿಸುವ ಕುರಿತು ತಜ್ಞರ ಜೊತೆ ಮಾತುಕತೆ ನಡೆಯುತ್ತಿದೆ.ಅವರ ಬಳಿ ಚರ್ಚಿಸಿದ ನಂತರ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತೇವೆ. ಈ ಕುರಿತು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ವಿಜಯ ಮಲ್ಯ ಹೇಳಿದ್ದಾರೆ.
ಸಂಸ್ಥೆಯು ಎಂಟು Airbus A-320 ವಿಮಾನಗಳನ್ನು ತರಿಸಿ ಕೊಳ್ಳುವ ನಿರೀಕ್ಷೆಯಿದೆ. ಅಲ್ಲದೆ ಕೆಲವು ಖಾಸಗಿ ವಿಮಾನಗಳನ್ನು ಗುತ್ತಿಗೆ ಪಡೆಯಲಿದೆ. ಈಗಾಗಲೇ ಮಲ್ಯ ಬಳಿ ‘ಯುಬಿ ಆ್ಯರ್’ ಹೆಸರಿನಲ್ಲಿ ಒಂದು ಖಾಸಗಿ ವಿಮಾನವಿದೆ. ಮಲ್ಯ ಸ್ವತಃ ವಿಮಾನ ಚಾಲನೆ ಬಲ್ಲವರಾಗಿದ್ದಾರೆ.
ಪ್ರಮಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಈ ವಾಯು ಸಾರಿಗೆ ಸಂಸ್ಥೆ ಬೆಂಗಳೂರಿನಿಂದಲೇ ಕಾರ್ಯ ನಿರ್ವಹಿಸಲಿದೆ ಎಂದು ಮಲ್ಯ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications