ಭಾರತೀಯ ವಿಜ್ಞಾನಿಗಳಿಂದ ಏಡ್ಸ್ ರೋಗ ನಿರೋಧಕ ಔಷಧಿ: ಸಿಬಲ್
ಭಾರತೀಯ ವಿಜ್ಞಾನಿಗಳಿಂದ ಏಡ್ಸ್ ರೋಗ ನಿರೋಧಕ ಔಷಧಿ: ಸಿಬಲ್
ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಹೆಚ್ಚಳ
ಅವರು ಐರ್‌ಲ್ಯಾಂಡ್‌ನ ಡಬ್ಲೀನ್‌ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಏಡ್ಸ್ ರೋಗನಿರೋಧಕ ಔಷಧಿಯ ಕುರಿತ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಈ ರೋಗ ನಿರೋಧಕವನ್ನು ಸಾರ್ವಜನಿಕವಾಗಿ ಬಳಸಲು 7ರಿಂದ 10 ವರ್ಷಗಳು ಬೇಕಾಗಬಹುದು. ಭಾರತದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಎಚ್‌ಐವಿಯು ಲೈಂಗಿಕ ಕಾರ್ಯಕರ್ತರು, ಮಾದಕ ಚಟಕ್ಕೆ ಬಲಿಯಾದವರು ಮತ್ತು ಟ್ರಕ್ ಚಾಲಕರಂತಹ ವಲಸೆ ಕಾರ್ಮಿಕರ ಮೂಲಕ ಹೆಚ್ಚಾಗಿ ಪಸರಿಸುತ್ತಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications