ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಗಳಿಗಾಗಿ 2500 ಕೋಟಿ ರು. ಸಾಲ ; ವಿಶ್ವಬ್ಯಾಂಕ್‌ನತ್ತ ರಾಜ್ಯದ ಕೈ

By Staff
|
Google Oneindia Kannada News

ರಸ್ತೆ ಗಳಿಗಾಗಿ 2500 ಕೋಟಿ ರು. ಸಾಲ ; ವಿಶ್ವಬ್ಯಾಂಕ್‌ನತ್ತ ರಾಜ್ಯದ ಕೈ
ನಬಾರ್ಡ್‌ನಿಂದ 300 ಕೋಟಿ ರುಪಾಯಿ ಸಾಲ ಪಡೆಯಲು ಯತ್ನ

ಬೆಂಗಳೂರು : ರಾಜ್ಯದಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 2500 ಕೋಟಿ ರುಪಾಯಿ ಸಾಲ ನೀಡುವಂತೆ ವಿಶ್ವಬ್ಯಾಂಕ್‌ನ್ನು ಎಡತಾಕಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ರಾಜ್ಯ ಸರ್ಕಾರ ನಿರ್ಧರಿಸಿದೆ.

ರಸ್ತೆ ಕಾಮಗಾರಿಗಳಿಗೆ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಈ ಮುನ್ನಿನ ಕಾಂಗ್ರೆಸ್‌ ಸರ್ಕಾರ 2300 ಕೋಟಿ ರುಪಾಯಿ ಸಾಲವನ್ನು ವಿಶ್ವಬ್ಯಾಂಕ್‌ನಿಂದ ಪಡೆದಿತ್ತು . ಪ್ರಸ್ತುತ, ರಸ್ತೆ ಅಭಿವೃದ್ಧಿಯ ಎರಡನೇ ಹಂತವಾಗಿ ವಿಶ್ವಬ್ಯಾಂಕ್‌ನಿಂದ 2500 ಕೋಟಿ ರುಪಾಯಿ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಲೋಕೋಪಯೋಗಿ ಹಾಗೂ ಇಂಧನ ಸಚಿವ ಎಚ್‌.ಡಿ.ರೇವಣ್ಣ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ನಡೆದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆಯ ಮುಖ್ಯಾಂಶಗಳನ್ನು ಸಚಿವ ರೇವಣ್ಣ ಸುದ್ದಿಗಾರರಿಗೆ ನೀಡಿದರು. ರಸ್ತೆ ಅಭಿವೃದ್ಧಿ ಯೋಜನೆಯನ್ನು ವಿಶ್ವಬ್ಯಾಂಕ್‌ಗೆ ಸಲ್ಲಿಸಲಾಗುವುದು. ಈ ಯೋಜನೆ ಮೂರು ತಿಂಗಳಲ್ಲಿ ಅಂತಿಮ ರೂಪು ತಾಳಲಿದೆ ಎಂದರು.

ಮುಂಬರುವ ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಹಾಗೂ ನಿರ್ವಹಣೆಗಾಗಿ ಲೋಕೋಪಯೋಗಿ ಇಲಾಖೆಗೆ 500 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ನೀಡುವಂತೆ ಹಣಕಾಸು ಇಲಾಖೆಯನ್ನು ಸಂಪರ್ಕಿಸುತ್ತೇನೆ. ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಧಿ ಯೋಜನೆಯಡಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 300 ಕೋಟಿ ರುಪಾಯಿ ಸಾಲದ ನೆರವು ನೀಡುವಂತೆ ನಬಾರ್ಡ್‌ನ್ನು ಸಂಪರ್ಕಿಸಲಾಗುವುದು ಎಂದು ಸಚಿವ ರೇವಣ್ಣ ತಿಳಿಸಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X