ವಿಜಯಾ ಬ್ಯಾಂಕ್ : ಕೃಷಿಗೆ ಹೆಚ್ಚು ಹಣ, ಕಿಸಾನ್ ಕಾರ್ಡ್‌ಗೆ ಬೆಂಬಲ
ವಿಜಯಾ ಬ್ಯಾಂಕ್ : ಕೃಷಿಗೆ ಹೆಚ್ಚು ಹಣ, ಕಿಸಾನ್ ಕಾರ್ಡ್‌ಗೆ ಬೆಂಬಲ
ಸೆಂಟ್ರಲ್ ಬ್ಯಾಂಕಿಂಗ್ ಸಲ್ಯೂನ್ಸ್ ಅಡಿಯಲ್ಲಿ 360 ಘಟಕಗಳ ಪ್ರಾರಂಭಿಸಲು ಚಿಂತನೆ
ಪ್ರಸಕ್ತ ವಿತ್ತ ವರ್ಷದಲ್ಲಿ ಶೇ.30ರಷ್ಟು ಹೆಚ್ಚಿನ ಹಣವನ್ನು ಕೃಷಿ ವಲಯಕ್ಕೆ ನೀಡಲು ಉದ್ದೇಶಿಸಲಾಗಿದೆ. ಇದೇ ರೀತಿ ಕಿಸಾನ್ ಕಾರ್ಡ್‌ಗಳ ಸಂಖ್ಯೆಯನ್ನೂ ಶೇ.30ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ವಿಜಯ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಪಿ.ಎ.ಸೇಥಿ ಬುಧವಾರ ತಿಳಿಸಿದರು.
ಸೆಂಟ್ರಲ್ ಬ್ಯಾಂಕಿಂಗ್ ಸಲ್ಯೂನ್ಸ್ ಅಡಿಯಲ್ಲಿ ತನ್ನ 360 ಘಟಕಗಳನ್ನು ಪ್ರಾರಂಭಿಸಲು ಬ್ಯಾಂಕ್ ಉದ್ದೇಶಿಸಿದೆ. ಇದಲ್ಲಿ 180 ಘಟಕಗಳು 2004ರಲ್ಲಿಯೇ ಕಾರ್ಯಾರಂಭ ಮಾಡಲಿವೆ ಎಂದು ಸೇಥಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications