102 ದಾಟಿದ ಕನ್ನಂಬಾಡಿ; ಕಬಿನಿ-ಕೆಆರ್‌ಎಸ್ ಒಳಹರಿವು ಇಳಿಮುಖ
102 ದಾಟಿದ ಕನ್ನಂಬಾಡಿ; ಕಬಿನಿ-ಕೆಆರ್‌ಎಸ್ ಒಳಹರಿವು ಇಳಿಮುಖ
ತಮಿಳುನಾಡಿಗೆ ಹರಿದ ನೀರಿನ ಪ್ರಮಾಣ 8 ಟಿಎಂಸಿ
ಜೂನ್ 22ರ ಸಂಜೆ ದಾಖಲಾದಂತೆ- ಕಬಿನಿ ಜಲಾಶಯದ ಒಳಹರಿವು 8000 ಕ್ಯುಸೆಕ್ಸ್‌ಗೆ ಇಳಿದಿದ್ದು , ಕೆಆರ್‌ಎಸ್‌ನ ಒಳಹರಿವು 7821 ಕ್ಯುಸೆಕ್ಸ್‌ಗೆ ಇಳಿದಿದೆ. ಪ್ರಸ್ತುತ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 102.85 ಅಡಿಯಿದೆ. ಕಬಿನಿಯಲ್ಲಿ ನೀರಿನ ಮಟ್ಟ 2281.23 ಅಡಿಯಷ್ಟಿದೆ.
ಕೇರಳದ ವೈನಾಡು ಪ್ರದೇಶದಲ್ಲಿ ಉಂಟಾದ ವ್ಯಾಪಕ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿತ್ತು . ಆದರೆ ಪ್ರಸ್ತುತ ಮಳೆಯ ಪ್ರಮಾಣ ಕುಸಿದಿರುವುದರಿಂದ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ.
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಈವರೆಗೆ 8 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಒಳಹರಿವು ಕುಗ್ಗುತ್ತಿರುವುದರಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ












Click it and Unblock the Notifications