ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಗೆಹರಿಯದ ಸೀಟು ಹಂಚಿಕೆ ಕಗ್ಗಂಟು ; ಸಿಐಟಿ ಕೌನ್ಸೆಲಿಂಗ್‌ ಮುಂದೆ

By Staff
|
Google Oneindia Kannada News

ಬಗೆಹರಿಯದ ಸೀಟು ಹಂಚಿಕೆ ಕಗ್ಗಂಟು ; ಸಿಐಟಿ ಕೌನ್ಸೆಲಿಂಗ್‌ ಮುಂದೆ
ಜೂನ್‌ 24ರ ಬದಲಿಗೆ ಜುಲೈ 8ರಿಂದ ಕೌನ್ಸೆಲಿಂಗ್‌ ಆರಂಭ

ಬೆಂಗಳೂರು : ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ಸೀಟು ಹಂಚಿಕೆ ಕಗ್ಗಂಟು ಪರಿಹಾರವಾಗದಿರುವ ಹಿನ್ನೆಲೆಯಲ್ಲಿ ಸಿಇಟಿ ಕೌನ್ಸೆಲಿಂಗ್‌ನ್ನು ಸರ್ಕಾರ ಜುಲೈ 8ಕ್ಕೆ ಮುಂದೂಡಿದೆ.

ಈ ಮುನ್ನ ನಿಗದಿಪಡಿಸಿದ್ದಂತೆ ಜೂನ್‌ 24ರಿಂದ ಸಿಇಟಿ ಕೌನ್ಸೆಲಿಂಗ್‌ ಶುರುವಾಗಬೇಕಿತ್ತು . ಆದರೆ ಸೀಟು ಹಂಚಿಕೆ ಕಗ್ಗಂಟಿಗೆ ಪರಿಹಾರ ಸಿಗದಿರುವ ಹಿನ್ನೆಲೆಯಲ್ಲಿ ಜುಲೈ 8ರಿಂದ ಕೌನ್ಸೆಲಿಂಗ್‌ ನಡೆಯಲಿದೆ. ಜುಲೈ 8ರೊಳಗೆ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಆಶಾಭಾವನೆಯನ್ನು ಸರ್ಕಾರ ಹೊಂದಿದೆ.

ಸಿಇಟಿ ಕೌನ್ಸೆಲಿಂಗ್‌ ಮುಂದಕ್ಕೆ ಹೋಗಿರುವ ವಿಷಯವನ್ನು ಕೈಗಾರಿಕಾ ಸಚಿವ ಪಿಜಿಆರ್‌ ಸಿಂಧ್ಯಾ ಸೋಮವಾರ (ಜೂ.21) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿದ್ಯಾರ್ಥಿಗಳ ಹಿತರಕ್ಷಣೆ ರಕ್ಷಿಸಲು ಹಾಗೂ ಸೀಟು ಹಂಚಿಕೆ ಬಿಕ್ಕಟ್ಟು ಪರಿಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಂಧ್ಯಾ ಹೇಳಿದರು.

ಸರ್ಕಾರಕ್ಕೆ 75 ಹಾಗೂ ಖಾಸಗಿಯವರಿಗೆ 25 ಸೀಟು ಎನ್ನುವ ಸೂತ್ರಕ್ಕೆ ಸರ್ಕಾರ ಈಗಲೂ ಬದ್ಧವಾಗಿದೆ. ಹಿಂದುಳಿದ ವರ್ಗಗಳು, ಪರಿಶಿಷ್ಠರು ಹಾಗೂ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಆ ಕಾರಣದಿಂದಾಗಿ ಆಂಧ್ರ ಹಾಗೂ ಕೇರಳ ಮಾದರಿಯಲ್ಲಿ ವೃತ್ತಿ ಶಿಕ್ಷಣ ಶುಲ್ಕ ಪ್ರಕ್ರಿಯೆ ಜಾರಿಗೊಳಿಸುವಂತೆ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಂಪುಟ ಉಪ ಸಮಿತಿ ಸಲಹೆ ಮಾಡಿದೆ ಎಂದು ಸಿಂಧ್ಯಾ ಹೇಳಿದರು.

ಜೂನ್‌ 28ರಂದು ಸಿಇಟಿ ಪ್ರವೇಶ ಪ್ರಕ್ರಿಯೆ ಬಗ್ಗೆ ಚರ್ಚಿಸಲು ಸಂಪುಟ ಉಪ ಸಮಿತಿ ಮತ್ತೆ ಸಭೆ ಸೇರಲಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X