ರಾಜ್ಯದ ಮೊದಲ ಮಹಿಳಾ ವಿ.ವಿ.ಗೀಗ ವಾರ್ಷಿಕೋತ್ಸವದ ಸಂಭ್ರಮ
ರಾಜ್ಯದ ಮೊದಲ ಮಹಿಳಾ ವಿ.ವಿ.ಗೀಗ ವಾರ್ಷಿಕೋತ್ಸವದ ಸಂಭ್ರಮ
2004 ಜೂನ್21ಕ್ಕೆ ಒಂದು ವರ್ಷ ಪೂರ್ಣ
2003ನೇ ಇಸವಿಯ ಜೂನ್23 ರಂದು ಕರ್ನಾಟಕ ವಿ.ವಿ.2000 ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯದ ಮೊದಲ ಮಹಿಳಾ ವಿವಿಯು ಆರಂಭವಾಯಿತು. ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ಅವರ ಸಬಲೀಕರಣದಂತಹ ಉದಾತ್ತ ಧ್ಯೇಯದೊಂದಿಗೆ ಈ ವಿವಿಯು ಜನಿಸಿದೆ.
ಪ್ರಸ್ತುತ ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ಶಿಕ್ಷಣ ಮತ್ತು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ. ಹಿಂದುಳಿದವರಿಗಾಗಿ ಒಂದು ಬೇರೆಯೇ ಪೀಠವಿದೆ. ಶಿಕ್ಷಣ ತಜ್ಞರಾದ ಡಾ. ಸಯೀದಾ ಅಖ್ತರ್ ವಿ.ವಿ.ಯ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ವಿವರಗಳಿಗಾಗಿ http://www.womenuniversity.kar.nic.in ಸಂದರ್ಶಿಸಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications