ಮಳೆ ಬಂತು ಮಳೆ ! ಗ್ರಾಮೀಣ ಪ್ರದೇಶಗಳಿಗೆ 24 ತಾಸೂ ವಿದ್ಯುತ್‌ !

ಮಳೆ ಬಂತು ಮಳೆ ! ಗ್ರಾಮೀಣ ಪ್ರದೇಶಗಳಿಗೆ 24 ತಾಸೂ ವಿದ್ಯುತ್‌ !
ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಳ, ಜಲ ವಿದ್ಯುತ್‌ ಸ್ಥಾವರಗಳಲ್ಲಿ ಉತ್ಸಾಹ

ಬೆಂಗಳೂರು : ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು , ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚುತ್ತಿರುವ ಕಾರಣ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತಕ್ಷಣದಿಂದಲೇ ಅನ್ವಯವಾಗುವಂತೆ 24 ತಾಸುಗಳ ವಿದ್ಯುತ್‌ ಸರಬರಾಜು ಕಲ್ಪಿಸಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.

ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಜಲ ವಿದ್ಯುತ್‌ ಕೇಂದ್ರಗಳು ಮತ್ತೆ ಚುರುಕುಗೊಂಡಿವೆ. ಇದರಿಂದಾಗಿ ಬೇಡಿಕೆ ವಿದ್ಯುತ್‌ ಪ್ರಮಾಣ 100 ಲಕ್ಷ ಮಿಲಿಯನ್‌ ಯುನಿಟ್‌ಗಳಿಂದ 58 ಲಕ್ಷ ಮಿಲಿಯನ್‌ ಯುನಿಟ್‌ಗೆ ಕುಸಿದಿದೆ. ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 24 ತಾಸು ವಿದ್ಯುತ್‌ ಸರಬರಾಜನ್ನು ತಕ್ಷಣದಿಂದಲೇ ಕಲ್ಪಿಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಇಂಧನ ಸಚಿವ ಎಚ್‌.ಡಿ.ರೇವಣ್ಣ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಸಿಂಗಲ್‌ ಫೇಸ್‌ ವಿದ್ಯುತ್‌ ಸರಬರಾಜು ಕಲ್ಪಿಸಲು ಹಾಗೂ ನಿಗದಿತ ವೇಳೆಯಲ್ಲಿ 3ಫೇಸ್‌ ವಿದ್ಯುತ್‌ ಸರಬರಾಜು ಕಲ್ಪಿಸಲು ರಾಜ್ಯ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌)ಕ್ಕೆ ಆದೇಶಿಸಲಾಗಿದೆ ಎಂದು ಸಚಿವ ರೇವಣ್ಣ ಹೇಳಿದರು.

(ಪಿಟಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+