ಬಿಎಸ್‌ಎನ್‌ಎಲ್‌ನ 1,80,000 ಸಿಮ್‌ಕಾರ್ಡ್‌ ಜುಲೈನಲ್ಲಿ ಬಿಡುಗಡೆ

ಬಿಎಸ್‌ಎನ್‌ಎಲ್‌ನ 1,80,000 ಸಿಮ್‌ಕಾರ್ಡ್‌ ಜುಲೈನಲ್ಲಿ ಬಿಡುಗಡೆ
ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ಬಿಎಸ್‌ಎನ್‌ಎಲ್‌ ಯಶಸ್ವಿ : ಚಾಕೊ

ದಾವಣಗೆರೆ: ಭಾರತೀಯ ಸಂಚಾರ ನಿಗಮವು ಮುಂಬರುವ ಜುಲೈನಲ್ಲಿ 1,80,000 ಸಿಮ್‌ ಕಾರ್ಡ್‌ಗಳನ್ನು ಕರ್ನಾಟಕದ ಗ್ರಾಹಕರಿಗಾಗಿ ಬಿಡುಗಡೆ ಮಾಡಲಿದೆ ಎಂದು ಕರ್ನಾಟಕ ಟೆಲಿಕಾಂನ ಮುಖ್ಯ ವ್ಯವಸ್ಥಾಪಕಾದ ಕೆ.ಜೆ. ಚಾಕೊ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಸಂಚಾರ ಸೇವಾ ಪದಕ ಮತ್ತು ಸಂಚಾರ ಸಾರಥಿ ಪ್ರಶಸ್ತಿಯನ್ನು ವಿತರಿಸಿ ಚಾಕೊ ಮಾತನಾಡುತ್ತಿದ್ದರು. ಬಿಎಸ್‌ಎನ್‌ಎಲ್‌ಗೆ ದಿನೇ ದಿನೇ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾರಣ ಇಷ್ಟೆ. ನಮ್ಮ ನಿಗಮದ ಸಂಕೇತಗಳು(ಸಿಗ್ನಲ್‌) ವ್ಯಾಪಕತೆಯನ್ನು ಹೊಂದಿವೆ. ಬಹಳಷ್ಟು ಗ್ರಾಮೀಣ ಪ್ರದೇಶ ಮತ್ತು ಹಳ್ಳಿಗಳಲ್ಲೂ ಕೂಡ ಬಲು ಸುಲಭವಾಗಿ ಮಾತನಾಡಬಹುದಾಗಿದೆ. ಜೊತೆಗೆ ಅವಿಶ್ರಾಂತ ಸೇವೆ ಸಲ್ಲಿಸುವ ಮೂಲಕ ಗ್ರಾಹಕರ ಮನ ಗೆದ್ದಿದ್ದೇವೆ ಎಂದು ಚಾಕೊ ತಿಳಿಸಿದರು.

ಬಿಎಸ್‌ಎನ್‌ಎಲ್‌ನ ಸ್ಥಿರ ದೂರವಾಣಿ ವ್ಯವಸ್ಥೆಯನ್ನೂ ಸಹ ಈಗ ತುಂಬ ಸುಲಭವಾಗಿ ಪಡೆಯಬಹುದಾಗಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿಗಳಂತಹ ನಗರಗಳಲ್ಲಂತೂ ಅರ್ಜಿ ಸಲ್ಲಿಸಿದ ಎರಡೇ ದಿನಗಳಲ್ಲಿ ಅರ್ಜಿದಾರರು ದೂರವಾಣಿಯನ್ನು ಹೊಂದಬಹುದಾಗಿದೆ. ಮೊಬೈಲುಗಳ ಬಳಕೆಯಿಂದ ಇತರ ಅನೇಕ ಖಾಸಗಿ ದೂರಸಂಪರ್ಕ ಕಂಪನಿಗಳ ದರಗಳಲ್ಲಿ ಇಳಿಮುಖವಾಗಲು ಅನುಕೂಲವಾಗಿದೆ ಎಂದು ಚಾಕೊ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಂಚಾರ ಸಾರಥಿ ಪ್ರಶಸ್ತಿಯನ್ನು ನಾಗಮ್ಮ ಮತ್ತು ಹನುಮಂತಪ್ಪ ಅವರಿಗೂ ಸಂಚಾರ ಸೇವಾ ಪದಕವನ್ನು ಕುಳ್ಗೋಡ್‌ ಮತ್ತು ಓಂಕಾರಮೂರ್ತಿಯವರಿಗೂ ನೀಡಲಾಯಿತು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+