ವಿಮಾನ ನಿರ್ಮಿಸಲು ಎಚ್‌ಎಎಲ್‌ಗೆ ರಷ್ಯಾ-ಅಮೇರಿಕಾದಿಂದ ಆಹ್ವಾನ

ವಿಮಾನ ನಿರ್ಮಿಸಲು ಎಚ್‌ಎಎಲ್‌ಗೆ ರಷ್ಯಾ-ಅಮೇರಿಕಾದಿಂದ ಆಹ್ವಾನ
ಫ್ರೆಂಚ್‌ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ವಿಮಾನ ತಯಾರಿ

ಬೆಂಗಳೂರು : ರಷ್ಯಾದ ಸುಖೋಯಿ ಡಿಸೈನ್‌ ಬ್ಯೂರೋ ಮತ್ತು ಅಮೆರಿಕಾದ ಬೋಯಿಂಗ್‌ ಕಾರ್ಪೊರೇಷನ್‌ ಜಂಟಿ ಸಂಸ್ಥೆಗಳು ನಾಗರಿಕ ಯಾನದ ವಿಮಾನ ನಿರ್ಮಾಣದಲ್ಲಿ ಅವರ ಜೊತೆ ಕೈಜೋಡಿಸುವಂತೆ ಎಚ್‌ಎಎಲ್‌ಗೆ ಆಹ್ವಾನ ನೀಡಿದೆ.

2007-08ರ ಹೊತ್ತಿಗೆ 60,75 ಮತ್ತು 95 ಮಂದಿ ಪ್ರಯಾಣಿಸುವ ನಾಗರಿಕಯಾನ ವಿಮಾನ ನಿರ್ಮಿಸುವ ಯೋಜನೆಗೆ ಎಚ್‌ಎಎಲ್‌ಗೆ ಆಹ್ವಾನವಿತ್ತಿದೆ ಎಂದು ಎಚ್‌ಎಲ್‌ ಅಧ್ಯಕ್ಷ ಎನ್‌ಆರ್‌ ಮೊಹಾಂತಿ ಹೇಳಿದ್ದಾರೆ.

ರಷ್ಯಾ ಸರಕಾರ ಇಗಾಗಲೇ 60 ವಿಮಾನ ಖರೀದಿಸಲು ಒಪ್ಪಿ ಕೊಂಡಿದೆ. ಅಲ್ಲದೆ ಮಕ್ತ ಮಾರುಕಟ್ಟೆಯಲ್ಲಿ ಈ ವಿಮಾನವನ್ನು ಮಾರಲಾಗುವುದು. ನಾವು ಅವರ ಜೊತೆ ಸೇರುವ ಕುರಿತು ನಿರ್ಧರಿಸಿಲ್ಲ. ಆದರೆ ನಿರ್ಮಾಣದ ಹಂತದಲ್ಲಿ ಏಂಜಿನ್‌ ಭಾಗವನ್ನು ತಯಾರಿಸುವ ಜವಬ್ದಾರಿ ನಿರ್ವಹಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಅಂತೆಯೇ ಫ್ರೆಂಚ್‌ ಸಂಸ್ಥೆ ಸ್ನೆಕ್ಮಾ ಆ್ಯರೋಸ್ಪೇಸ್‌ (Snecma Aerospace)ಜೊತೆ ಸೇರಿ ಬೆಂಗಳೂರಿನಲ್ಲಿ ವಿಮಾನ ತಯಾರಿಸುವ ಯೋಜನೆಯ ಮಾತುಕತೆ ಪ್ರಗತಿಯಲ್ಲಿದೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+