9/11 : ಅಲ್‌ಖ್ವೆ ೖದಾ ಉಗ್ರರಿಂದ ಅಮೆರಿಕಾ ಮೇಲೆ 11 ಜೆಟ್ ದಾಳಿ
9/11 : ಅಲ್‌ಖ್ವೆ ೖದಾ ಉಗ್ರರಿಂದ ಅಮೆರಿಕಾ ಮೇಲೆ 11 ಜೆಟ್ ದಾಳಿ
ಒಸಾಮ ಸಂಗಡಿಗರಿಂದ ಬೃಹತ್ ಮಾರಣ ಹೋಮಕ್ಕೆ ಸಂಚು
ಬರುವ ಸೆಪ್ಟಂಬರ್ 11ರಂದು ಅಮೆರಿಕಾದ ಮೇಲೆ 11 ಜೆಟ್‌ಗಳ ದಾಳಿ ನಡೆಸಲು ಅಲ್ ಖ್ವೆ ೖದಾ ವರಿಷ್ಠರು ಸಂಚು ರೂಪಿಸಿದ್ದಾರೆ ಎಂದು ಉಗ್ರಗಾಮಿಗಳ ದಾಳಿಗಳಿಗೆ ಸಂಬಂಧಿಸಿದ ಅಮೆರಿಕಾದ ರಾಷ್ಟ್ರೀಯ ಆಯೋಗ ತನ್ನ ವರದಿಯಲ್ಲಿ ಎಚ್ಚರಿಸಿದೆ.
ಅಮೆರಿಕಾದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ಮೇಲೆ ದಾಳಿ ನಡೆಸುವ ಮೂಲಕ ಭಾರೀ ಮಾರಣ ಹೋಮವನ್ನು ಅಲ್ ಖ್ವೆ ೖದಾ ಬಯಸಿದೆ. ಕ್ಯಾಲಿಫೋರ್ನಿಯ ಹಾಗೂ ವಾಷ್ಟಿಂಗ್ಟನ್‌ನ ಎತ್ತರದ ಕಟ್ಟಣಗಳು, ಸಿಐಎ ಮತ್ತು ಎಫ್‌ಬಿಐ ಕಚೇರಿಗಳು ಹಾಗೂ ಅಣು ಸ್ಥಾವರಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಲಾಗಿದೆ. ಸೆಪ್ಟಂಬರ್ 11, 2001ರ ದಾಳಿಯ ಮಾಸ್ಟರ್‌ಮೈಂಡ್ ಮೊಹಮ್ಮದ್ ಅಟ್ಟ ಈ ಬಾರಿಯೂ ಸಂಚು ರೂಪಿಸುತ್ತಿದ್ದಾನೆ ಎಂದು ವರದಿ ಎಚ್ಚರಿಸಿದೆ.
ಅಟ್ಟಾನ ಯೋಜನೆಗೆ ಅಲ್ ಖ್ವೆ ೖದಾದ ವರಿಷ್ಠ ಒಸಾಮ ಬಿನ್ ಲ್ಯಾಡೆನ್ ಇನ್ನೂ ಹಸಿರು ನಿಶಾನೆ ತೋರಬೇಕಿದೆ. ಈ ವಿಧ್ವಂಸಕ ಕೃತ್ಯಗಳ ಯೋಜನೆ ಕೊನೆಯ ಕ್ಷಣದಲ್ಲಿ ಬದಲಾಗುವ ಸಾಧ್ಯತೆಯೂ ಇಲ್ಲದಿಲ್ಲ . ಶ್ವೇತಭವನದ ಮೇಲೆ ದಾಳಿ ನಡೆಸಲು ಲ್ಯಾಡೆನ್ ಆಸಕ್ತಿ ಹೊಂದಿದ್ದಾನೆ. ಆದರೆ ಭದ್ರತಾ ಕಾರಣಗಳಿಗಾಗಿ ಈ ದಾಳಿಗೆ ಅಟ್ಟ ಹಿಂಜರಿಯುತ್ತಿದ್ದಾನೆ ಎಂದು ವರದಿ ತಿಳಿಸಿದೆ.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications