ಬಗೆಹರಿಯದ ಸಿಇಟಿ ಸೀಟು ಹಂಚಿಕೆ: ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

ಬಗೆಹರಿಯದ ಸಿಇಟಿ ಸೀಟು ಹಂಚಿಕೆ: ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು
92,915 ವಿದ್ಯಾರ್ಥಿಗಳಿಗೆ ಗೊಂದಲಮಯ ವಾತಾವರಣ

ಬೆಂಗಳೂರು : ಸಿಇಟಿ ಫಲಿತಾಂಶ ಪ್ರಕಟಗೊಂಡು(ಜೂನ್‌.10) ಎರಡು ದಿನ ಕಳೆದರೂ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಗೊಂದಲಕ್ಕೀಡಾಗಿದ್ದಾರೆ.

ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳ ಪ್ರವೇಶದ ಗೊಂದಲವು ಇನ್ನೂ ಮುಂದುವರಿಯುತ್ತಲಿದೆ. ಮೆರಿಟ್‌ ಮೀಸಲಾತಿ ಮತ್ತು ಪ್ರವೇಶ ಶುಲ್ಕ ನಿಗದಿಯಾಗದೇ ಇರುವುದು ಈ ಅತಂತ್ರ ಪರಿಸ್ಥಿತಿಗೆ ಕಾರಣ.

ರಾಜ್ಯದಲ್ಲಿ 92,915 ವಿದ್ಯಾರ್ಥಿಗಳು ಸೀಟಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ರಾಜ್ಯದಲ್ಲಿ 3367 ವೈದ್ಯಕೀಯ ಮತ್ತು 39,010 ತಾಂತ್ರಿಕ ಸೀಟುಗಳಿವೆ. ಸರಕಾರ ರೂಪಿಸಿದ್ದ 75:25 ಸೀಟು ಹಂಚಿಕೆ ಕೋಟಾವನ್ನು ಕಾಮೆಡ್‌-ಕೆ ಒಪ್ಪದಿರುವುದು ಈ ಸಮಸ್ಯೆಗೆ ಕಾರಣ. ಕಾಮೆಡ್‌-ಕೆ ಶೇಕಡಾ 50 ಸೀಟುಗಳು ಖಾಸಗಿಯವರಿಗೆ ಕೊಡಲು ಪಟ್ಟುಹಿಡಿದಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+