ದೇಶದ ಹಿರಿಯ ನಾಗರಿಕರಿಗಾಗಿ ಅಂಬಾನಿ ಟ್ರಸ್ಟ್‌ನಿಂದ ನಿಯತಕಾಲಿಕೆ
ದೇಶದ ಹಿರಿಯ ನಾಗರಿಕರಿಗಾಗಿ ಅಂಬಾನಿ ಟ್ರಸ್ಟ್‌ನಿಂದ ನಿಯತಕಾಲಿಕೆ
ಆಧ್ಯಾತ್ಮ, ಆರೋಗ್ಯ, ನವಚೈತನ್ಯ ನೀಡುವ ‘ಹಾರ್ಮೊನಿ-ಸೆಲೆಬ್ರೇಟ್ ಏಜ್’ ನಿಯತಕಾಲಿಕೆ ಮಾರುಕಟ್ಟೆಗೆ..
ನಮ್ಮ ದೇಶದಲ್ಲಿರುವಂತಹ ಸುಮಾರು 75. 9 ಕೋಟಿ ವೃದ್ಧರಲ್ಲಿ ಸುಮಾರು 9.52% ಜನರು ಯಾರನ್ನೂ ಅವಲಂಬಿಸಿರುವವರಲ್ಲ. ಅವರ ಸಮಸ್ಯೆಗಳು, ಒಂಟಿತನದ ಬದುಕಿಗೆ ಇದೊಂದು ಹೊಸ ರೂಪು ಕೊಡಲಿದೆ. ಇದು ಮೊದಲ ಹೆಜ್ಜೆಯಷ್ಟೆ. ವೃದ್ಧರ ಕಲ್ಯಾಣಕ್ಕಾಗಿ ಇನ್ನೂ ಹಲವಾರು ಯೋಜನೆಗಳನ್ನು ನಮ್ಮ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಟೀನಾ ಅಂಬಾನಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ಹಾರ್ಮೊನಿ-ಸೆಲೆಬ್ರೇಟ್ ಏಜ್ ನಿಯತಕಾಲಿಕೆಯಲ್ಲಿ ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ದೃಷ್ಠಿಕೋನಗಳುಳ್ಳ ಲೆಖನಗಳನ್ನು ಹೊಂದಿದೆ. ಮುದುಡಿದ ಮನಸ್ಸಿಗೆ ಧನಾತ್ಮಕ ಮತ್ತು ಚೈತನ್ಯದಾಯಕ ಮಾಹಿತಿ ಮತ್ತು ಜ್ಞಾನವನ್ನು ಒದಗಿಸುವಲ್ಲಿ ಈ ನಿಯತಕಾಲಿಕೆ ಸಹಾಯಕವಾಗಬಲ್ಲುದು. ಇದರಲ್ಲಿ ಬರೆಯುವ ಅಂಕಣಕಾರರೂ ಸಹ ಅನುಭವಿಗಳಾಗಿದ್ದು, ಎಲ್ಲ ಕ್ಷೇತ್ರಗಳ ಬಗೆಗೂ ಸ್ಥೂಲ ಮಾಹಿತಿಯನ್ನು ಇದು ಒದಗಿಸಲಿದೆ ಎಂದು ಟೀನಾ ಅಂಬಾನಿ ನುಡಿದರು.
ಅಂಬಾನಿ ಟ್ರಸ್ಟ್ ಸಧ್ಯದಲ್ಲೇ ಅಂತರಜಾಲ ತಾಣವನ್ನೂ ಪ್ರಾರಂಭಿಸಲಿದೆ. ಆರೋಗ್ಯ, ವಾಣಿಜ್ಯ, ಆಧ್ಯಾತ್ಮ, ಯೋಗ ವಿಷಯಗಳನ್ನು ಹೊತ್ತು ತರಲಿರುವ ಈ ತಾಣದ ವಿಳಾಸ ಇಂತಿದೆ: www.harmonyindia.org
(ಪಿಟಿಐ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications