ಖಾತೆ ಹಂಚಿಕೆ ಕ್ಯಾತೆ :ಧರಂ-ಗೃಹ, ಸಿದ್ದರಾಮಯ್ಯ-ವಿತ್ತ, ಖರ್ಗೆ-ಸಾರಿಗೆ
ಖಾತೆ ಹಂಚಿಕೆ ಕ್ಯಾತೆ :ಧರಂ-ಗೃಹ, ಸಿದ್ದರಾಮಯ್ಯ-ವಿತ್ತ, ಖರ್ಗೆ-ಸಾರಿಗೆ
ಪ್ರಮುಖ ಖಾತೆಗಳು ದಳದ ಪಾಲಿಗೆ
ಖಾತೆ ಹಂಚಿಕೆ ಕುರಿತು ದಳ ಮುಖಂಡರು ಮತ್ತು ಮುಖ್ಯಮಂತ್ರಿಗಳ ನಡುವೆ ಮೂರು ಸುತ್ತಿನ ಮಾತುಕತೆ ನಡೆದಿತ್ತು. ಅಂತಿಮವಾಗಿ ಜೂನ್8ರ ಸಂಜೆ ಒಮ್ಮತಕ್ಕೆ ಬರಲಾಗಿದೆ. ಆದರೂ ನಗಾರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿಯಂತಹ ಪ್ರಮುಖ ಖಾತೆಗಳು ಹಂಚಿಕೆಯಾಗಿಲ್ಲ.
ಈಗಿನ ಖಾತೆ ಹಂಚಿಕೆ ತಾತ್ಕಾಲಿಕವಾಗಿದೆ. ಅಧಿವೇಶನದ ಬಳಿಕ ಮತ್ತೆ ಸಂಪುಟ ವಿಸ್ತರಣೆಗೊಳ್ಳಲಿದೆ. 22 ನೂತನ ಸಚಿವರು ಸಂಪುಟ ಸೇರಲಿದ್ದಾರೆ. ಆಗ ಖಾತೆ ಹಂಚಿಕೆಗೆ ಅಂತಿಮ ರೂಪ ನೀಡಲಾಗುವುದು ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಸಚಿವರ ಖಾತೆಗಳು :
| ಹೆಸರು | ಪಕ್ಷ | ಸಚಿವರ ಖಾತೆಗಳು |
| ಧರ್ಮ ಸಿಂಗ್ ( ಮು.ಮ.) | ಕಾಂಗ್ರೆಸ್ | ಗೃಹ, ರಾಜ್ಯ ಗುಪ್ತ ವಾರ್ತೆ, ಸಂಪುಟ ವ್ಯವಹಾರ , ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
| ಸಿದ್ದರಾಮಯ್ಯ ( ಉಪ ಮು.ಮ.) | ಜೆಡಿಎಸ್ | ಹಣಕಾಸು, ಅಬಕಾರಿ, ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ |
| ಸಂಪುಟ ದರ್ಜೆ ಸಚಿವರು | ||
| ಮಲ್ಲಿಕಾರ್ಜುನ ಖರ್ಗೆ | ಕಾಂಗ್ರೆಸ್ | ಬೃಹತ್, ಮಧ್ಯಮ ಮತ್ತು ಸಣ್ಣ ನೀರಾವರಿ, ಸಾರಿಗೆ |
| ಪಿ.ಜಿ.ಆರ್. ಸಿಂಧ್ಯಾ | ಜೆಡಿಎಸ್ | ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಮತ್ತು ಮೂಲ ಸೌಕರ್ಯಾಭಿವೃದ್ಧಿ, ನಾಗರಿಕ ವಿಮಾನಯಾನ, ವಿಮಾನ ನಿಲ್ದಾಣ ಪ್ರಾಧಿಕಾರ |
| ಎಂ.ಪಿ. ಪ್ರಕಾಶ್ | ಜೆಡಿಎಸ್ | ಕಂದಾಯ, ಮುಜರಾಯಿ ಮತ್ತು ಸಂಸದೀಯ ವ್ಯವಹಾರ |
| ಡಿ. ಮಂಜುನಾಥ್ | ಜೆಡಿಎಸ್ | ಉನ್ನತ ಶಿಕ್ಷಣ |
| ಎಸ್.ಆರ್.ಮೋರೆ | ಕಾಂಗ್ರೆಸ್ | ಪೌರಾಡಳಿತ ಮತ್ತು ನಗರ ಮೂಲಭೂತ ಸೌಕರ್ಯ ಹಣಕಾಸು ನಿಗಮ |
| ಎಚ್.ಡಿ.ರೇವಣ್ಣ | ಜೆಡಿಎಸ್ | ಲೋಕೋಪಯೋಗಿ ಮತ್ತು ಇಂಧನ |
| ಕೆ.ಶ್ರೀನಿವಾಸ ಗೌಡ | ಕಾಂಗ್ರೆಸ್ | ಕೃಷಿ |
| ಮಿರಾಜುದ್ದೀನ್ ಪಟೇಲ್ | ಜೆಡಿಎಸ್ | ಪಶುಸಂಗೋಪನೆ ಮತ್ತು ವಕ್ಫ್ |
| ಪ್ರಕಾಶ್ ಬಿ. ಹುಕ್ಕೇರಿ | ಕಾಂಗ್ರೆಸ್ | ಕೃಷಿ ಮಾರುಕಟ್ಟೆ |
| ರಾಜ್ಯ ಸಚಿವರು | ||
| ತನ್ವೀರ್ ಸೇಠ್ | ಕಾಂಗ್ರೆಸ್ | ಕಾರ್ಮಿಕ ಮತ್ತು ಹಜ್ |
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications