ಅಕಾಲಿ ದಳದ ಚರಣ್‌ಜಿತ್‌ಸಿಂಗ್ ಅತ್ವಾಲ್ ಲೋಕಸಭೆಯ ಉಪಾಧ್ಯಕ್ಷ
ಅಕಾಲಿ ದಳದ ಚರಣ್‌ಜಿತ್‌ಸಿಂಗ್ ಅತ್ವಾಲ್ ಲೋಕಸಭೆಯ ಉಪಾಧ್ಯಕ್ಷ
ಅವಿರೋಧವಾಗಿ ಆಯ್ಕೆಯಾದ ಅತ್ವಾಲ್
ಅವರು ಪಂಜಾಬಿನ ಫಿಲೌರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ಪಂಜಾಬ್ ವಿಧಾನ ಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಸಂಪ್ರದಾಯದಂತೆ ಯುಪಿಎ ಕೂಟ ಈ ಸ್ಥಾನವನ್ನು ವಿರೋಧ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಈ ಸ್ಥಾನಕ್ಕೆ ಎನ್‌ಡಿಎ ಮೈತ್ರಿಕೂಟವು ಅಕಾಲಿದಳದ ಅತ್ವಾಲ್ ಅವರನ್ನು ಆಯ್ಕೆ ಮಾಡಿದೆ.
ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಹಯೋಗ ಅಗತ್ಯವಾಗಿದೆ. ಸಂಸತ್ತಿನಲ್ಲಿ ಪಕ್ಷಭೇಧ ಮರೆತು ಕಾರ್ಯನಿರ್ವಹಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಮುಖಪುಟ / ವಾರ್ತೆಗಳು












Click it and Unblock the Notifications